Mysore
22
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಮೈಸೂರು ವಿವಿ ಬಜೆಟ್‌ಗೆ ತುರ್ತು ಸಭೆ ಕೋರಿ ರಾಜ್ಯಪಾಲರಿಗೆ ಪತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 2025-26ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಬಜೆಟ್ ಅಂದಾಜುಗಳನ್ನು ಚರ್ಚಿಸಿ ಮತ್ತು ಅನುಮೋದಿಸಲು ಮಾ.31ರೊಳಗೆ ತುರ್ತು ಸಿಂಡಿಕೇಟ್ ಸಭೆ ಕರೆಯಲು ಸೂಚಿಸುವಂತೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ.

ಮೈಸೂರು ವಿವಿ ಸಿಂಡಿಕೇಟ್‌ಗೆ ರಾಜ್ಯಪಾಲರಿಂದ ನಾಮ ನಿರ್ದೇಶನಗೊಂಡಿರುವ ಸದಸ್ಯ ಡಾ.ಟಿ.ಆರ್. ಚಂದ್ರಶೇಖರ್ ಅವರು, ಈ ಬಗ್ಗೆ ಪತ್ರ ಬರೆದಿದ್ದು ಬಜೆಟ್ ಸಭೆ ಕರೆಯುವಂತೆ ಕುಲಸಚಿವರಿಗೆ ನಿರ್ದೇಶನ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಈಗಾಗಲೇ ಮೈವಿವಿ ಕುಲಸಚಿವರಿಗೆ ಪತ್ರ ಬರೆದು ಬಜೆಟ್ ಸಭೆ ಕರೆಯುವಂತೆ ವಿನಂತಿಸಿದ್ದೆ. ಆದರೆ, ಆ ಪತ್ರಕ್ಕೆ ಇದುವರೆವಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷವೂ ಇದೇ ರೀತಿ ಕಾನೂನು ಉಲ್ಲಂಘನೆಯಾಗಿತ್ತು ಎಂಬ ಅಂಶವನ್ನು ಸಹ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಕುಲಸಚಿವರಿಗೆ ಬರೆದಿರುವ ಪತ್ರದ ಪ್ರತಿಯನ್ನೂ ಲಗತ್ತಿಸಿದ್ದಾರೆ.

109 ವರ್ಷಗಳ ಇತಿಹಾಸವುಳ್ಳ ನಮ್ಮ ಹೆಮ್ಮೆಯ ಮೈಸೂರು ವಿವಿ ಸಿಂಡಿಕೇಟ್‌ನ ಜವಾಬ್ದಾರಿಯುತ ಸದಸ್ಯನಾಗಿ ನಿಯಮದ ಪ್ರಕಾರ, 2025-26ರ ಬಜೆಟ್ ಅಂದಾಜುಗಳನ್ನು ಮಾರ್ಚ್ 31, 2025ರ ಮೊದಲು ಸಿಂಡಿಕೇಟ್‌ನಲ್ಲಿ ತಯಾರಿಸಿ, ಮಂಡಿಸಿ ಮತ್ತು ಅನುಮೋದಿಸಬೇಕು ಎಂದು ನಾನು ಬಲವಾಗಿ ನಂಬುತ್ತೇನೆ. ಹಾಗೆಯೇ ಇದೇ ಭರವಸೆಯನ್ನು ಕಳೆದ ವರ್ಷದ ಆರ್ಥಿಕ ವರ್ಷದ ಆಯವ್ಯಯ ಅಂದಾಜುಗಳ ಅನುಮೋದನೆಯ ಸಭೆಯಲ್ಲಿ, ಮಾನ್ಯ ಹಣಕಾಸು ಅಧಿಕಾರಿಗಳು ಮತ್ತು ಕುಲಪತಿಗಳು ಹಾಗೂ ಕುಲಸಚಿವರು ಸಭೆಗೆ ಭರವಸೆ ನೀಡಿ, ಮುಂದಿನ 2025-26ರ ಬಜೆಟ್ ಅಂದಾಜುಗಳನ್ನು ಕಾನೂನು ಪ್ರಕಾರ ಫೆಬ್ರವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಮಂಜೂರಾತಿ ಪಡೆಯುವುದಾಗಿ ಸಭೆಗೆ ಭರವಸೆ ನೀಡಿದ ಕಾರಣ ಅಂದಿನ ಆಯವ್ಯಯವನ್ನು ಸಿಂಡಿಕೇಟ್ ಅನುಮೋದಿಸಿರುತ್ತದೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಒಂದು ವೇಳೆ ತಾವು ನಿಯಮದ ಪ್ರಕಾರ 2025-26ರ ಆರ್ಥಿಕ ವರ್ಷದ ಆಯವ್ಯವನ್ನು ಮಾ.31ರೊಳಗಾಗಿ ಅನುಮೋದಿಸದೆ, ಕಳೆದ ವರ್ಷದಂತೆ ಈ ಸಲವೂ ತಪ್ಪು ಮಾಡಿ, ತಡವಾಗಿ ಏಪ್ರಿಲ್ ತಿಂಗಳ ನಂತರ ಬಜೆಟ್ ಮಂಡಿಸಿದರೆ ಅದಕ್ಕೆ ನನ್ನ ಅಸಮ್ಮತಿ ಇದ್ದು, ಉಲ್ಲಂಘನೆ ಮತ್ತು ದೋಷಗಳನ್ನು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

 

 

Tags:
error: Content is protected !!