ಮೈಸೂರು: ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆಯಲ್ಲಿ ಮುಂಜಾನೆ ಸಫಾರಿಯ ವೇಳೆ ಹುಲಿಯೊಂದು ಮರಿಗಳೊಂದಿಗೆ ದರ್ಶನ ನೀಡಿದೆ.
ಕಾಕನಟೆಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಶುಕ್ರವಾರ(ಮಾರ್ಚ್.28) ಈ ಅಪರೂಪದ ದೃಶ್ಯ ಸೆರೆಯಾಗಿದ್ದು, ಪುಟ್ಟ ಪುಟ್ಟ ಮರಿಗಳನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.
ತಾಯಿ ಹುಲಿಯು ತನ್ನ ಪುಟ್ಟ ಮರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಿದ್ದು, ರಸ್ತೆ ದಾಟುವ ವೇಳೆ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ರಸ್ತೆ ದಾಟಿದೆ. ಈ ಅಪರೂಪದ ದೃಶ್ಯ ಕಂಡು ಪ್ರವಾಸಿಗರು ಬೆರಗಾಗಿದ್ದಾರೆ.