ಮೈಸೂರು: ಜಿಲ್ಲೆಯ ಜಯಪುರದ ಹಾರೋಹಳ್ಳಿ ರಸ್ತೆಯಲ್ಲಿ ಕಾರನ್ನು ಅಡ್ಡಗಡ್ಡಿ ದರೋಡೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಕಾರಿನ ಮಾಲೀಕ ಹಾಗೂ ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರಿನ ನಂಬರ್ ಆಧರಿಸಿ ಪತ್ತೆ ಕಾರ್ಯ ಮಾಡಿದ್ದು, ಕಾರಿನ ಮಾಲೀಕ ಪತ್ತೆಯಾಗಿದ್ದಾರೆ. ಕಾರನ್ನು ಮೂವರು ದುಷ್ಕರ್ಮಿಗಳು ಬಾಡಿಗೆಗೆ ಪಡೆದುಕೊಂಡಿದ್ದರೆಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಮಾಲೀಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಇನ್ನು ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಂಕಿತ ವ್ಯಕ್ತಿ ಮೈಸೂರಿನ ಬಡಾವಣೆಯೊಂದರ ನಿವಾಸಿಯಾಗಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.