ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ನವಜೋಡಿಗಳು ಆರ್‌ಸಿಬಿಗೆ ಮನಸೋತಿದ್ದಾರೆ.
ಹೌದು, ಮೈಸೂರು ಜಿಲ್ಲೆಯ ಜೋಡಿಗಳಾದ ಮನೋಜ್ ಹಾಗೂ ರಕ್ಷಿತಾ ಎಂಬುವವರು, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಆರ್‌ಸಿಬಿ ಜೆರ್ಸಿ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಮೂಲಕ ಆರ್‌ಸಿಬಿಗೆ ವಿಶೇಷವಾಗಿ ಅಭಿಮಾನ ಮೆರೆದಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮದ ನಿವಾಸಿಗಳಾಗಿರುವ ಮನೋಜ್ ಹಾಗೂ ರಕ್ಷಿತಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಜೈ ಆರ್‌ಸಿಬಿ. ಈ ಸಲ ಕಮ್ ನಮ್ದೆ ಎಂದು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.