ಮೈಸೂರು : ಪೂರ್ವ ಮುಂಗಾರು ಮಳೆ ಚುರುಕುಗೊಂಡಿದ್ದು, ಕೆಲ ದಿನಗಳಿಂದ ಮಳೆಯಾಗುತ್ತಿದೆ. ಇಂದು ಕೂಡ ನಗರದ ಹಲವೆಡೆ ಮಳೆಯಾಗಿದೆ.
ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಿತ್ತು. ಮಧ್ಯಾಹ್ನ ಬಿರು ಬಿಸಿಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯಿತು.
ಎಲ್ಲೆಲ್ಲಿ ಮಳೆ?
ಬೋಗಾದಿ, ಸರಸ್ವತಿ ಪುರಂ, ಗಂಗೋತ್ರಿ, ಕುವೆಂಪುನಗರ, ಅಶೋಕಪುರಂ, ಅಗ್ರಹಾರ, ಕೆ.ಆರ್ ವೃತ್ತ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಉದಯಗಿರಿ ಸೇರಿದಂತೆ ಹಲವೆಡೆ ಮಳೆ ಸುರಿಯಿತು.
ಈ ವೇಳೆ ವಾಹನ ಸವಾರರಿಗೆ ಅಡಚಣೆಯಾಯಿತು. ಇನ್ನಷ್ಟು ಜನರು ಅಲ್ಲಲ್ಲಿ ನಿಂತು ಆಶ್ರಯ ಪಡೆದರೆ, ಹೊರಗಿನವರು ಬಸ್ ನಿಲ್ದಾಣಕ್ಕೆ ಮಳೆಯಲ್ಲೇ ನೆನೆದು ಬಸ್‌ಗಳನ್ನು ಹತ್ತಿ ಹೊರಟರು.





