Mysore
35
few clouds

Social Media

ಗುರುವಾರ, 23 ಏಪ್ರಿಲ 2026
Light
Dark

ವಿವಾದಿತ ಸ್ಥಳ | ಕ್ಯಾತಮಾರನಹಳ್ಳಿ ಗ್ರಾಮಸ್ಥರಿಂದ ಸಭೆ

ಮೈಸೂರು: ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಅರೇಬಿಕ್ ಶಾಲೆ ತೆರೆಯಲು ಮೈಸೂರು ಜಿಲ್ಲಾಧಿಕಾರ ಅನುಮತಿ ನೀಡಿದ ಹಿನ್ನೆಲೆ ಇಲ್ಲಿನ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ನಡೆಸಿದ್ದಾರೆ.

ಭಾನುವಾರ ಬೆಳಿಗ್ಗೆ ಇಲ್ಲಿನ ಹುಲಿಯಮ್ಮ ದೇವಸ್ಥಾನ ಬಳಿ ಸಭೆ ನಡೆದಿದ್ದು, ಸಭೆಯಲ್ಲಿ ನೂರಾರು ಹಿಂದು ಮುಖಂಡರು ಹಾಗೂ ಮಹಿಳೆಯರು ಭಾಗಿಯಾಗಿದ್ದರು.

ಜಿಲ್ಲಾಧಿಕಾರಿಗಳು ಗ್ರಾಮಸ್ಥರುಗಳ ಅಭಿಪ್ರಾಯದ ವಿರುದ್ಧವಾಗಿ ಆದೇಶ ನೀಡಿದ್ದಾರೆ, ಇದು ಸರಿಯಲ್ಲ. ಸದರಿ ಜಾಗ ವಸತಿ ವಲಯ, ಯಾವ ಭೂ ಪರಿವರ್ತನೆಯಾಗಿಲ್ಲ. ಇದನ್ನು ಪರಿಗಣಿಸದೆ ಶಾಲೆಗೆ ಅನುಮತಿ ನೀಡಿದ್ದಾರೆ. ವಿವಾದಿತ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವುದನ್ನು ತಪ್ಪಿಸುವಂತೆ ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದ್ದಾರೆ.

ಡಿಸಿ ಆದೇಶದ ವಿರುದ್ಧ ಕಾನೂನು ರೀತಿ ಹೋರಾಟಕ್ಕೆ ಮುಂದಾಗಲಿದ್ದೇವೆ. ಈ ಬಗ್ಗೆ ಪುನರ್‌ಪರಿಶೀಲನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಸೀದಿ ತೆರವಿಗೆ ಅನುಮತಿ ಬೇಡ ; ಚಂದ್ರಮ್ಮ

ವಿವಾದಿತ ಸ್ಥಳದಲ್ಲಿ ಮಸೀದಿ ತೆರೆಯಲಿಕ್ಕೆ ಅನುಮತಿ ನೀಡಬಾರದು. ಆ ಮಸೀದಯಿಂದಲೇ ನನ್ನ ಮಗನ ಕೊಲೆ ಆಗಿದೆ. ಯಾವುದೇ ರೀತಿಯ ಚಟುವಟಿಕೆಗೆ ಅನುಮತಿ ಕೊಡಬಾರದು. ಒಂದು ವೇಳೆ ಅನುಮತಿ ಕೊಟ್ಟರೆ ಅದೇ ಸ್ಥಳದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಮೊಮ್ಮಕ್ಕಳು ನಾವು ಎಲ್ಲರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕ್ಯಾತಮಾರನಹಳ್ಳಿ ರಾಜು ತಾಯಿ ಚಂದ್ರಮ್ಮ ಹೇಳಿದ್ದಾರೆ.

Tags:
error: Content is protected !!