Mysore
27
haze

Social Media

ಮಂಗಳವಾರ, 18 ನವೆಂಬರ್ 2025
Light
Dark

ಮೈಸೂರು: ನಗರದ ಎರಡು ಕಡೆಗಳಲ್ಲಿ ಐಟಿ ದಾಳಿ, ದಾಖಲೆಗಳ ಪರಿಶೀಲನೆ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆಗಳಲ್ಲಿ ಆದಾಯ ಅಧಿಕಾರಿಗಳು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಇಲ್ಲಿನ ಮಾರುತಿನಗರ ಮತ್ತು ರಾಮಕೃಷ್ಣನಗರದಲ್ಲಿ ಇಂದು(ಫೆಬ್ರವರಿ.5) ಆದಾಯ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಉದ್ಯಮಿಗಳ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಮಾರುತಿನಗರದ ಕಾಂತರಾಜು ನಿವಾಸ ಮತ್ತು ರಾಮಕೃಷ್ಣನಗರದ ರಾಮಕೃಷ್ಣೇಗೌಡ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ.

ರಾಮಕೃಷ್ಣೇಗೌಡ ಅವರು ಕಂಟ್ರಾಕ್ಟರ್‌ ಮತ್ತು ಇಟ್ಟಿಗೆ ಫ್ಯಾಕ್ಟರಿ ಹೊಂದಿದ್ದರೇ, ಕಾಂತರಾಜ್‌ ಎಂಬುವವರು ಸಿವಿಲ್‌ ಕಂಟ್ರಾಕ್ಟರ್‌ ಆಗಿದ್ದಾರೆ. ಇನ್ನೂ ಈ ಉದ್ಯಮಿಗಳು ಪ್ರಭಾವಿ ರಾಜಕಾರಣಿಗಳ ಆಪ್ತರು ಎನ್ನಲಾಗಿದೆ. ಹೀಗಾಗಿ ಐಟಿ ಅಧಿಕಾರಿಗಳು, ಈ ಇವರಿಬ್ಬರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

Tags:
error: Content is protected !!