Mysore
20
overcast clouds
Light
Dark

ಮೈಸೂರು| ಮನೆಯಲ್ಲಿ ಅಕ್ರಮ ಪ್ರಾಣಿ ಸಾಕಣೆ: ಓರ್ವನ ಬಂಧನ

ಮೈಸೂರು: ಮೈಸೂರಿನ ಸಿಐಡಿ ಅರಣ್ಯ ಘಟಕದ ಪೊಲೀಸರು ಮನೆಯಲ್ಲಿ ಅನಧಿಕೃತವಾಗಿ 9 ವಿವಿಧ ಜಾತಿಯ 18 ಹಾವುಗಳು, 4 ಸಿವೆಟ್‌ ಕ್ಯಾಟ್‌ ಎಂಬ ಸಣ್ಣ ಗಾತ್ರದ ಬೆಕ್ಕುಗಳನ್ನು ಸಾಕುತ್ತಿದ್ದ ಆರೋಪಿಯನ್ನು ಬಂಧಿಸಿ, ಹಾವು ಮತ್ತು ಬೆಕ್ಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯಿಂದ ವಶಪಡಿಸಿಕೊಂಡ ಹಾವುಗಳ ವಿವರ:
ಕನ್ನಡಕ ಹಾವು-04
ಟ್ರಿಂಕೆಟ್‌ ಹಾವು-02
ಸಾಮಾನ್ಯ ಕ್ರೈಟ್‌-02
ಸಾಮಾನ್ಯ ತೋಳ ಹಾವು-01
ಸಾಮಾನ್ಯ ಕುಕ್ರಿ-01
ಸಾ ಸ್ಕಾಲ್ಡ್‌ ವೈಪರ್‌-02
ಇಲಿ ಹಾವು-02
ಬೆಕರ್ಡ ಕೀಲ್‌ಬ್ಯಾಕ್‌-01
ಸ್ಯಾಂಡ್‌ ಬೋವಾ-03

ಹಾವಿನ ವಿಷ ತೆಗೆಯುವ ಘಟಕವೂ ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ. ಮೈಸೂರಿನ ಅವರ ಮನೆಯಲ್ಲಿ 4 ಸಿವೆಟ್‌ ಕ್ಯಾಟ್‌ ಸಬ್‌ ಅಡಲ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (WLPA 1972) ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ