Mysore
18
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮೈಸೂರು| ಮಾನವ ಮತ್ತು ಪ್ರಾಣಿ ಸಂಘರ್ಷ: ಪ್ರಮುಖ ದಾಳಿಗಳ ಕುರಿತ ಮಾಹಿತಿ

ಮೈಸೂರು : ಹಳೇ ಮೈಸೂರು ಪ್ರಾಂತ್ಯಕ್ಕೆ ಸೇರಿದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹುಲಿ ಮತ್ತು ಆನೆ ದಾಳಿ ಹೆಚ್ಚಾಗಿದ್ದು, ಮಾವನ ಮತ್ತು ಪ್ರಾಣಿ ಸಂಘರ್ಷಕ್ಕೆ ಕೊನೆ ಎಂದು ಎಂಬುದು ಜನರ ಕೂಗಾಗಿದೆ.

ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ ಸೇರಿದಂತೆ ಕಾಡಂಚಿನ ಊರುಗಳಲ್ಲಿ ನಿರಂತರವಾಗಿ ಮಾನವ ಮತ್ತು ಪ್ರಾಣಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದರಲ್ಲಿ ಪ್ರಾಣಿಗಳ ಸಾವಿಗಿಂತ ಮಾನವರ ಸಾವಿನ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಘನವೆತ್ತ ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳು ಮತ್ತು ಯೋಜನೆಗಳು ಯಾವುವು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಕಳೆದ ನಾಲ್ಕು ತಿಂಗಳಿನಿಂದ ನಡೆದಿರುವ ಮಾನವ ಮತ್ತು ಪ್ರಾಣಿ ಸಂಘರ್ಷ ನಡುವಿನ ಪ್ರಮುಖ ದಾಳಿಗಳ ಕುರಿತ ಮಾಹಿತಿ ಇಲ್ಲಿದೆ.

ಹುಲಿ/ಮಾನವ ಸಂಘರ್ಷ
ನವೆಂಬರ್‌.೨೪ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ಮಹಿಳೆ ರತ್ನಮ್ಮ ಹುಲಿ ದಾಳಿಗೆ ತುತ್ತಾಗಿದ್ದರು.

ನವೆಂಬರ್‌.೦೮ ಸರಗೂರು ತಾಲೂಕಿನ ಕಾಡಬೇಗೂರು ಗ್ರಾಮದ, ಗ್ರಾ.ಪಂ ಸದಸ್ಯ ಬಾಲಾಜಿ ನಾಯ್ಕ ಹುಲಿ ದಾಳಿಯಿಂದ ಸಾವನ್ನಪ್ಪಿದ್ದಾರೆ.

ಅಕ್ಟೋಬರ್‌.೦೩ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ರೈತ ಗಣೇಶ್‌ ಹುಲಿ ದಾಳಿಗೆ ಬಲಿ.

ಅಕ್ಟೋಬರ್.‌೩೧ ನಂಜನಗೂಡು ತಾಲೂಕಿನ ಹಡೆಯಾಲ ಬಳಿಯ ಮಹದೇವನಗರದಲ್ಲಿ ಹುಲಿ ದಾಳಿಗೆ ಹಸು ಬಲಿ, ದನಗಾಹಿ ವೀರಭದ್ರ ಹುಲಿ ದಾಳಿಯಿಂದ ಗಾಯಗೊಂಡಿದ್ದರು.

ಸೆಪ್ಟೆಂಬರ್‌.೨೨ ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಕೊಪ್ಪಲು ಗ್ರಾಮದ ರಮೇಶ್‌ ಹುಲಿ ದಾಳಿಯಿಂದ ಗಾಯಗೊಂಡಿದ್ದರು.

ಸೆಪ್ಟೆಂಬರ್‌.೦೪ ಎಚ್‌ಡಿ ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ಬಾಲಕ ಚರಣ್‌ ಹುಲಿ ದಾಳಿಗೆ ತುತ್ತಾಗಿದ್ದಾನೆ.

ಆನೆ/ಮಾನವ ಸಂಘರ್ಷ
ನವೆಂಬರ್‌.೨೦ ಮಂಡ್ಯ ತಾಲೂಕಿನ ಲಾಳನಕೆರೆಯ ಸಾಕಮ್ಮ ಎಂಬುವವರು ಆನೆ ದಾಳಿಯಿಂದ ಮೃತರಾಗಿದ್ದಾರೆ.

ಸೆಪ್ಟೆಂಬರ್‌.೦೨ ಸರಗೂರು ತಾಲೂಕಿನ ಕುಂದೂರು ಗ್ರಾಮದ ಹೊರವಲಯದಲ್ಲಿ ಸಿದ್ದರಾಜ ನಾಯ್ಕ ಎಂಬುವವರ ಮೇಲೆ ಆನೆ ಗಂಭೀರವಾಗಿ ದಾಳಿ ಮಾಡಿತ್ತು.

ಆಗಸ್ಟ್‌.೧೪ ಮಡಿಕೇರಿಯ ಅರೆಕೋಡು ಗ್ರಾಮದ ನಿವಾಸಿ ಕಟ್ಟೇಮಾಡು ದೇವಪ್ಪ ಆನೆ ದಾಳಿಗೆ ಬಲಿ.

ಆಗಸ್ಟ್‌.೨೫ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಅಡಿನಾಡೂರು ಗ್ರಾಮದಲ್ಲಿ ಈರಪ್ಪ ಆನೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!