ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ಧತಾ ಕಾರ್ಯ ಗರಿಗೆದರಿದೆ.
ಆಗಸ್ಟ್.4ರಂದು ಕಾಡಿನಿಂದ ನಾಡಿಗೆ ಗಜಪಡೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಕಾವಾಡಿಗರು ಹಾಗೂ ಮಾವುತರ ಕುಟುಂಬಸ್ಥರು ತಂಗಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಗಜಪಡೆಗಳ ಆರೈಕೆ ಮಾಡಲು ಮೈಸೂರಿಗೆ ಬರುವ ಕಾವಾಡಿಗರು ಹಾಗೂ ಮಾವುತರು ಸುಮಾರು ಎರಡು ತಿಂಗಳ ಕಾಲ ಅರಮನೆ ಆವರಣದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮರ ಮತ್ತು ಕಬ್ಬಿಣದ ಪೋಲ್ ಮತ್ತು ಜಂಕ್‌ಶೀಟ್ ತಗಡುಗಳನ್ನು ಬಳಸಿ ತಾತ್ಕಾಲಿಕ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಬರುವ 9 ಆನೆಗಳಿಗೆ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು, ಮೈಸೂರಿಗೆ ಗಜಪಡೆ ಎಂಟ್ರಿ ಆದ ಬಳಿಕ ನಾಡಹಬ್ಬ ದಸರಾ ಮಹೋತ್ಸವ ಮತ್ತಷ್ಟು ರಂಗೇರಲಿದೆ.





