ಮೈಸೂರು: ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿನ ಶಕ್ತಿ ಪ್ರದರ್ಶನ ನಡೆದ ಮೈದಾನದಲ್ಲಿಯೇ ಇಂದು(ಆ.10) ಬಿಜೆಪಿ-ಜೆಡಿಎಸ್ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಹಾಗೂ ಸರ್ಕಾರದ ಹಗರಣಗಳ ಕುರಿತು ಆ.3 ರಂದು ಬೆಂಗಳೂರಿನ ಕೆಂಗೇರಿ ಸಮೀಪ ಬಿಜೆಪಿ-ಜೆಡಿಎಸ್ ಆರಂಭಿಸಿದ ಪಾದಯಾತ್ರೆ ಆ.9ರ ಸಂಜೆ ಮೈಸೂರು ತಲುಪಿದ್ದು, ಇಂದು(ಆ.10) ನಡೆಯುವ ಬೃಹತ್ ಸಮಾವೇಶದೊಂದಿಗೆ ಪಾದಯಾತ್ರೆ ಪೂರ್ಣಗೊಳ್ಳಲಿದೆ.
ನಿನ್ನೆ(ಆ.10)ನಡೆದ ಕಾಂಗ್ರೆಸ್‌ನ ಜನಾಂದೋಲದಲ್ಲಿ ಸಿಎಂ,ಡಿಸಿಎಂ ಹಾಗೂ ಸಚಿವರು ಮೈತ್ರಿ ಪಕ್ಷಗಳಿಗೆ ವಾಗ್ದಾಳಿ ನಡೆಸಿದ ರೀತಿಯಲ್ಲೇ ವಿಪಕ್ಷಗಳು ಕೂಡ ವಾಗ್ದಾಳಿ ನಡೆಸಲು ರಣತಂತ್ರ ರೂಪಿಸಿದ್ದಾರೆ.
ಇಂದಿನ ದೋಸ್ತಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ರಣಕಹಳೆ ಮೊಳಗಲಿದೆ. ಜೊತೆಗೆ ಕಾಂಗ್ರೆಸ್ ಅಕ್ರಮದ ಬಗ್ಗೆ ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಟೀಕೆಪ್ರಹಾರ ನಡೆಸುವ ಸಾಧ್ಯತೆಯಿದೆ.