ಮೈಸೂರು: ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ಜನವರಿ 7 ರಂದು ಮೈಸೂರು ಬಂದ್‌ಗೆ ಕರೆ ನೀಡಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದು ಸಮಿತಿ ಮುಖಂಡ ಪುರುಷೋತ್ತಮ್ ಮನವಿ ಮಾಡಿದರು.
ಗುರುವಾರ ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 6 ರಿಂದ ಸಂಜೆ 4ರವರೆಗೆ ಬಂದ್ ಇರಲಿದೆ. ವಿವಿಧ ಸಂಘಟನೆಗಳು, ಒಕ್ಕೂಟಗಳು ಈಗಗಲೇ ಬೆಂಬಲ ನೀಡಿವೆ. ಶಾಲೆ-ಕಾಲೇಜು, ಸಾರಿಗೆ ಸೇವೆ, ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವ ಮೂಲಕ ಬಂದ್ ಬೆಂಬಲಿಸಬೇಕು ಎಂದು ಕೋರಿದರು.