Mysore
30
few clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಮೈಸೂರು : ಸೆಸ್ಕ್‌ನಲ್ಲಿ ಅಪ್ರೆಂಟಿಸ್‌ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಮೈಸೂರು ವತಿಯಿಂದ 2025-26ನೇ ಸಾಲಿನ ಒಂದು ವರ್ಷದ ಅಪ್ರೆಂಟಿಸ್‌ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌(ಅಪ್ರೆಂಟಿಸ್‌ ಸಂಖ್ಯೆ 77) ಹಾಗೂ ಸಿವಿಲ್‌ ಇಂಜಿನಿಯರಿಂಗ್‌(ಅಪ್ರೆಂಟಿಸ್‌ ಸಂಖ್ಯೆ 03) ವಿಷಯದಲ್ಲಿ ಇಂಜಿನಿಯರಿಂಗ್‌ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಅಭ್ಯರ್ಥಿಗಳಿಗೆ ಪ್ರತಿ ಮಾಹೆಯ ಅಪ್ರೆಂಟಿಸ್‌ ವೇತನ 9000/- ರೂ. ನೀಡಲಾಗುವುದು.

ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌(ಅಪ್ರೆಂಟಿಸ್‌ ಸಂಖ್ಯೆ 51) ಹಾಗೂ ಸಿವಿಲ್‌ ಇಂಜಿನಿಯರಿಂಗ್‌(ಅಪ್ರೆಂಟಿಸ್‌ ಸಂಖ್ಯೆ 04) ವಿಷಯದಲ್ಲಿ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಇವರುಗಳಿಗೆ ಪ್ರತಿ ಮಾಹೆ 8000/- ಅಪ್ರೆಂಟಿಸ್‌ ವೇತನ ನೀಡಲಾಗುವುದು.

ಉಳಿದಂತೆ ಬಿ.ಕಾಂ(ಅಪ್ರೆಂಟಿಸ್‌ ಸಂಖ್ಯೆ 55), ಬಿ.ಬಿ.ಎ(ಅಪ್ರೆಂಟಿಸ್‌ ಸಂಖ್ಯೆ 15), ಬಿ.ಸಿ.ಎ(ಅಪ್ರೆಂಟಿಸ್‌ ಸಂಖ್ಯೆ 15), ಬಿ.ಎ(ಅಪ್ರೆಂಟಿಸ್‌ ಸಂಖ್ಯೆ 20) ಹಾಗೂ ಬಿ.ಎಸ್ಸಿ(ಅಪ್ರೆಂಟಿಸ್‌ ಸಂಖ್ಯೆ 10) ವಿಷಯಗಳ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಇವರುಗಳಿಗೆ ಪ್ರತಿ ಮಾಹೆಯ ಅಪ್ರೆಂಟಿಸ್‌ ವೇತನ 9000/- ರೂ. ನೀಡಲಾಗುವುದು.

ಅಪ್ರೆಂಟಿಸ್‌ ತರಬೇತಿಗೆ ಅರ್ಜಿಸಲ್ಲಿಸುವ ಇಂಜಿನಿಯರಿಂಗ್‌ ಪದವೀಧರ, ಪದವೀಧರ(ಇಂಜಿನಿಯರಿಂಗ್‌ ಹೊರತು), ಡಿಪ್ಲೊಮಾ ಅಭ್ಯರ್ಥಿಗಳು 2020, 2021, 2022, 2023 ಹಾಗೂ 2024ನೇ ಸಾಲಿನಲ್ಲಿ ಉತ್ತೀರ್ಣರಾಗಿರಬೇಕು. ಆಸಕ್ತ ಅಭ್ಯರ್ಥಿಗಳು 20-01-2025ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಪಡೆಯಬಹುದಾಗಿದ್ದು 06-02-2025 ಆನ್‌ಲೈನ್‌ ಅಪ್ಲಿಕೇಷನ್‌ ಸಲ್ಲಿಸಲು ಕೊನೆಯ ದಿನವಾಗಿದೆ.

ಆಸಕ್ತ ಅಭ್ಯರ್ಥಿಗಳು ಚಾವಿಸಾನಿನಿ ಅಧಿಕೃತ ವೆಬ್‌ ಸೈಟ್‌ https://cescmysore.karnataka.gov.in ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಚಾವಿಸಾನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: