Mysore
20
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮೈಸೂರು: ಬಾವಿ ಪಕ್ಕ ಪತ್ತೆಯಾಗಿ ರಕ್ಷಿಸಿದ್ದ ನವಜಾತ ಶಿಶು ಸಾವು

ಮೈಸೂರು: ಬಾವಿ ಪಕ್ಕ ಪತ್ತೆಯಾದ ನವಜಾತ ಶಿಶುಯೊಂದನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ತಾಲೂಕಿನ ಸಾಹುಕಾರಹುಂಡಿ ಗ್ರಾಮದ ಬಾವಿ ಪಕ್ಕದಲ್ಲಿ ಬಟ್ಟೆ ಸುತ್ತಿದ್ದ ನವಜಾತ ಗಂಡು ಶಿಶು ಭಾನುವಾರ ಬೆಳಗ್ಗೆ ಸುಮಾರು ೮ ಗಂಟೆ ಸಮಯದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ರೂಪಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಹಿರಿಯ ಮೇಲ್ವಿಚಾರಕಿ ಪಾರ್ವತಿ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರ ಸೂಚನೆಯಂತೆ ಆಶಾ ಕಾರ್ಯಕರ್ತೆ ರುಕ್ಮಿಣಿ ಅವರು ಆಂಬುಲೆನ್ಸ್‌ನಲ್ಲಿ ನವಜಾತ ಶಿಶುವನ್ನು ಚೆಲುವಾಂಬ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು, ನವಜಾತ ಶಿಶು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪಾರ್ವತಿ ಅವರು ನೀಡಿದ ದೂರಿನನ್ವಯ ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನವಜಾತ ಶಿಶುವಿನ ಪೋಷಕರ ಪತ್ತೆಗೆ ಕ್ರಮ ವಹಿಸಿದ್ದಾರೆ.

Tags:
error: Content is protected !!