Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ಶಾಸಕ ಶ್ರೀವತ್ಸ ಈ ಕೂಡಲೇ ಕ್ಷಮ ಕೇಳಬೇಕು: ಸೋಮಶೇಖರ್‌ ಆಗ್ರಹ

ಮೈಸೂರು: ಸಿದ್ದರಾಮಯ್ಯ ಅವರು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ತರ ಜೈಲಿನಲ್ಲಿ ಕೂತು ಆಡಳಿತ ನಡೆಸುತ್ತಾರೆ ಎಂಬ ಹೇಳಿಕೆ ಅಕ್ಷಮ್ಯ, ಬಾಲಿಷವಾದದ್ದು. ಇದು ಇವರ ಕೊಳಕು ಮನಸ್ಥಿತಿಯನ್ನ ತೋರಿಸುತ್ತದೆ. ಈ ಕೂಡಲೇ ಸಿಎಂ ಸಿದ್ದರಾಮಯ್ಯ ಅವರನ್ನು ಶಾಸಕ ಶ್ರೀವತ್ಸ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್‌ ಆಗ್ರಹಿಸಿದರು.

ಇಂದು(ಆ.14) ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ವ ಅವರ ಬಗ್ಗೆ ಮಾತಾಡುವ ನೈತಿಕತೆ ಇವರಿಗಿಲ್ಲ, ಅವರ ಬಗ್ಗೆ ಈ ರೀತಿಯ ಬಾಲಿಷ ಹೇಳಿಕೆ ಕೊಡುವುದು ಸರಿಯಲ್ಲ. ಶ್ರೀವತ್ಸ ಅವರು ಶಾಸಕ ಸ್ಥಾನದಲಿದ್ದು, ಯಾವ ರೀತಿ ಮಾತನಾಡಬೇಕು ಎಂಬುದನ್ನು ತಿಳಿಯಲಿ. ಈ ಕೂಡಲೇ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲ ಅವರು ಸಭೆ ನಡೆಸುವ ಸ್ಥಳಗಳಲೆಲ್ಲಾ ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಎಂ ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ. ಅವರಿಗೆ ಇದುವರೆಗೂ ಮೈಸೂರಿನಲ್ಲಿ ಒಂದು ಸ್ವಂತ ಮನೆ ಇಲ್ಲ. ಬಿಜೆಪಿಯಲ್ಲಿರುವ ಶಾಸಕ, ಸಂಸದರ ಮೇಲೆ ತನಿಖೆ ಮಾಡಿದ್ರೆ ನೂರಕ್ಕೆ 95 ರಷ್ಟು ಭ್ರಷ್ಟರೇ ಇದ್ದಾರೆ. ಅವರು ಈ ಕೂಡಲೇ ಆ ಮಾತನ್ನು ವಾಪಸ್ ಪಡೆಯಬೇಕು. ಇವರು ಮಾಡುವ ಕೆಲಸವನ್ನು ಬಿಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡೈರಿ ವೆಂಕಟೇಶ್, ವೀಣಾ, ರವಿ, ಸೇರಿದಂತೆ ಇನ್ನಿತರರು ಇದ್ದರು.

Tags: