Mysore
33
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ರಾಗಿ ಬಣವೆಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಕಿಡಿಗೇಡಿಗಳ ಕುಕೃತ್ಯಕ್ಕೆ ರೈತ ಕಂಗಾಲು

ಎಚ್‌.ಡಿ.ಕೋಟೆ`: ತಾಲೂಕಿನ ಮಾದಾಪುರ ಗ್ರಾಮದ ಜಮೀನಿನಲ್ಲಿರಿಸಿದ್ದ ರಾಗಿ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಎರಡು ಎಕರೆ ಇಪ್ಪತೆರಡು ಗುಂಟೆ ಜಮೀನನಲ್ಲಿದ್ದ ಬಣವೆಗಳು ಬೆಂಕಿ ಗಾಹುತಿಯಾಗಿವೆ.

ರೈತ ಮಲ್ಲನಾಯಕ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬಣವೆಗಳನ್ನು ಇಟ್ಟಿದ್ದರು.  ಗುರುವಾರ ಬೆಳಗ್ಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ರೈತ ಕಂಗಾಲಾಗಿದ್ದಾರೆ. ದುರ್ಘಟನೆಯ ಮಾಹಿತಿಯನ್ನು ರೈತ ತಾಲೂಕಿನ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಿಮಿಸುವಷ್ಟರಲ್ಲಿ ಬಣವೆಗಳು ಸಂಪೂರ್ಣ ಬೆಂಕಿಗಾ ಹುತಿಯಾಗಿದ್ದವು.

ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ದುರ್ಘಟನೆಯನ್ನು ಕಂಡ ಅಕ್ಕ-ಪಕ್ಕದ ಗ್ರಾಮಸ್ಥರ ರೈತರು ಮರುಗಿದರು.

Tags:
error: Content is protected !!