Mysore
26
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಂಜನಗೂಡು: ಬೈಕ್‌ಗೆ ಮಿಲಿಟರಿ ತರಬೇತಿ ವಾಹನ ಡಿಕ್ಕಿ; ಮಹಿಳೆ ಸ್ಥಳದಲ್ಲೇ ಸಾವು

ನಂಜನಗೂಡು: ತಾಲೂಕಿನ ಚಿನ್ನದಹುಂಡಿ ಗ್ರಾಮದಲ್ಲಿ ಮಿಲಿಟರಿ ತರಬೇತಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಲ್ಲಹಳ್ಳಿ ಗ್ರಾಮದ ಪಾಪಣ್ಣನಾಯಕ ಎಂಬುವವರ ಪತ್ನಿ ಮಂಗಳಮ್ಮ ( 35 ) ಮೃತ ಮಹಿಳೆ. ಇನ್ನು 44 ವರ್ಷದ ಪಾಪಣ್ಣನಾಯಕ, 10 ವರ್ಷದ ತೇಜಸ್‌, 8 ವರ್ಷದ ಲಕ್ಷ್ಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಲ್ಲಹಳ್ಳಿ ಗ್ರಾಮದಿಂದ ಪಾಪಣ್ಣನಾಯಕ, ಪತ್ನಿ ಮಂಗಳಮ್ಮ, ಮಕ್ಕಳಾದ ತೇಜಸ್‌ ಹಾಗೂ ಲಕ್ಷ್ಮಿ ಜತೆಯಾಗಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಚಿನ್ನದಹುಂಡಿ ಬಳಿ ಮಿಲಿಟರಿ ತರಬೇತಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪಾಪಣ್ಣನಾಯ ಹಾಗೂ ಮಕ್ಕಳು ರಸ್ತೆಯ ಎಡಬದಿಗೆ ಬಿದ್ದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದು, ರಸ್ತೆಯ ಬಲಕ್ಕೆ ಬಿದ್ದ ಮಂಗಳಮ್ಮ ಮೇಲೆ ವಾಹನದ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮರಣ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕವಲಂದೆ ಪೊಲೀಸ್‌ ಠಾಣೆಯ ಎಎಸ್‌ಐ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಕವಲಂದೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: