ನಂಜನಗೂಡು: ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ರಾಜ್ಯವನ್ನೇ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ನಂಜನಗೂಡು ಪೊಲೀಸರು ಸಾಲಗಾರರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಐದು ಮೈಕ್ರೋಫೈನಾನ್ಸ್ ಗಳ ಮೇಲೆ ಪ್ರಕರಣ ದಾಖಲಿಸಿರುವುದಲ್ಲದೆ, ಮಂಗಳವಾರ ನಾಲ್ವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಿಎಸ್‌ಎಸ್ ಕಂಪೆನಿಯ ಅರಸನಕರೆಯ ಆಕಾಶ, ಗ್ರಾಮೀಣ ಕೂಟದ ಸಿದ್ದರಾಜು ಹುಣಸಳ್ಳಿ, ಉಜ್ಜೀವನ್ -ನಾನ್ಸ್‌ನ ಲೋಕೇಶ, ಐಡಿಎಫ್‌ಎಸ್ ಕಂಪೆನಿಯ ಕೋಟೆ ಸಿದ್ದರಾಜು ಅವರನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಮೂಲಕ ನಂಜನಗೂಡಿನ ಡಿವೈಎಸ್‌ಪಿ, ಹುಲ್ಲಹಳ್ಳಿ ಠಾಣಾಧಿಕಾರಿ ಚೇತನ್ ತಂಡ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಗರಣದ ಮೊದಲ ಬಂಧನ ಮಾಡಿರುವ ಪ್ರಶಂಸೆಗೆ ಪಾತ್ರವಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಧರ್ಮಸ್ಥಳ ಸ್ತ್ರೀಶಕ್ತಿ ಸಹಾಯ ಸಂಘದ ಸ್ಥಳೀಯ ವ್ಯವಸ್ಥಾಪಕರಿಗಾಗಿ ಬಲೆ ಬೀಸಲಾಗಿದೆ ಎಂದು ತಿಳಿದುಬಂದಿದೆ.