Mysore
32
clear sky

Social Media

ಮಂಗಳವಾರ, 03 ಮಾರ್ಚ್ 2026
Light
Dark

ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿ ಸೀಮಾ ಲಟ್ಕರ್‌ ಮತ್ತು ಎಸ್ಪಿ ಆಗಿ ಎನ್‌.ವಿಷ್ಟುವರ್ಧನ ನೇಮಕ

ಮೈಸೂರು : ನೂತನ ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿ ಐಪಿಎಸ್‌ ಅಧಿಕಾರಿ ಸೀಮಾ ಲಟ್ಕರ್‌ ಹಾಗೂ ಮೈಸೂರು ಎಸ್ಪಿ ಆಗಿ ಎನ್‌ ವಿಷ್ಟುವರ್ಧನ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರವು ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿ ಮಾಡಿ ಒಟ್ಟು ೨೫ ಐಪಿಎಸ್‌ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ತಕ್ಷಣ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಈ ಹಿಂದೆ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಸೀಮಾ ಲಟ್ಕರ್‌ ಇದೀಗ ರಮೇಶ್‌ ಬಾನೋತ್‌ ಅವರ ವರ್ಗಾವಣೆ ಜಾಗಕ್ಕೆ ನೇಮಿಸಿ ಆದೇಶ ಮಾಡಲಾಗಿದೆ. ಸಿ.ಬಿ ರಿಷ್ಯಂತ್‌ ಅವರನ್ನು ಬೆಂಗಳೂರಿನ ವೈರಲೆಸ್‌ ಎಸ್‌ ಪಿ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ದಕ್ಷಿಣ ಕನ್ನಡದ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯತೀಶ್‌ ಎನ್‌ ಅವರನ್ನ ನೇಮಕಮಾಡಲಾಗಿದೆ.

ಕವಿತಾ ಬಿ.ಟಿ ಅವರನ್ನು ಚಾಮರಾಜನಗರ ಜಿಲ್ಲೆಯ ಎಸ್‌ಪಿಯಾಗಿ ನೇಮಿಸಲಾಗಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಪೊಲೀಸ್‌ ವರಷ್ಠಾಧಿಕಾರಿಯಾಗಿ  ಮಲ್ಲಿಕಾರ್ಜುನ್ ಬಾಲದಂಡಿಯನ್ನು‌ ನೇಮಕ ಮಾಡಲಾಗಿದೆ

Tags:
error: Content is protected !!