Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಗರದ ವಿವಿಧೆಡೆ ಪಾದಯಾತ್ರೆ ನಡೆಸಿದ ಮೇಯರ್ ಶಿವಕುಮಾರ್

ಮೈಸೂರು : ನಗರದ ಗಾಂಧಿ ನಗರ ಸೇರಿದಂತೆ ವಾರ್ಡ್ ನಂ.28 ಹಾಗೂ 29 ರಲ್ಲಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಮಳೆಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದರು. ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೇಯರ್ ಶಿವಕುಮಾರ್ ಸೂಚಿಸಿದರು.

ಪಾದಯಾತ್ರೆ ನಡೆಸಿ ಪರಿಸ್ಥಿತಿ ವೀಕ್ಷಿಸಿ, ಜನರ ಕುಂದುಕೊರತೆಗಳನ್ನು ಆಲಿಸಿದರು. ಹಲವು ದಿನಗಳಿಂದ ರಾತ್ರಿ ವೇಳೆ ಬೀಳುತ್ತಿರುವ ಮಳೆಯಿಂದಾಗಿ ರಸ್ತೆಗಳು, ಒಳಚರಂಡಿ ಸಂಪರ್ಕ ಹಾಳಾಗಿರುವುದನ್ನು ವೀಕ್ಷಿಸಿದರು. ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪಾದಯಾತ್ರೆ ಆರಂಭಿಸಿದ ಅವರಿಗೆ ಹಲವು ಸಮಸ್ಯೆಗಳನ್ನು ನೋಡಿದ್ದು, ರಸ್ತೆಗಳು ಹಾಳಾಗಿರುವುದು, ಮ್ಯಾನ್‍ಹೋಲ್‍ಗಳು ಉಕ್ಕಿ ಹರಿಯುತ್ತಿದ್ದುದ್ದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ನಿವಾಸಿಗಳ ಅಳಲು : ಒಳಚರಂಡಿ ಮಾರ್ಗ ದುರಸ್ತಿಪಡಿಸದ ಕಾರಣದಿಂದ ಕೊಳಚೆ ನೀರು ರಸ್ತೆಗೆ ಬರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದು ನಿವಾಸಿಗಳು ತಿಳಿಸಿದರು.
ಹೊಸದಾಗಿ ಯುಜಿಡಿ ಅಳವಡಿಕೆಗೆ 23 ದಿನಗಳಲ್ಲಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಬೇಕು. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಅವರಿಗೆ ಮೊಬೈಲ್ ಪೋನ್‌ ಕರೆ ಮಾಡಿ ಸೂಚಿಸಿದರು.

ನಗರಪಾಲಿಕೆ ಸದಸ್ಯ ಅಸ್ರತುಲ್ಲಾ, ಮುಖಂಡ ಶರತ್ ಸತೀಶ್, ಯುಜಿಡಿ ವಿಭಾಗದ ಇಇ ಸಿಂಧು, ಎಇಇ ಮಹೇಶ್, ಬಿಜೆಪಿ ಗಾಂಧಿನಗರ ಘಟಕದ ಅಧ್ಯಕ್ಷ ನಾಗರಾಜು, ಮುಖಂಡರಾದ ವಿಜಯ್, ಸುರೇಶ್, ರಾಜೇಶ್, ಸುರೇಂದ್ರ, ಕರ್ಣ, ಸಾಧಿಕ್, ಪ್ರಭು, ವಿವೇಕ್, ಸಚಿನ್, ರಾಮಗೋಪಾಲ್, ಚಂದ್ರು, ದೀಪಕ್ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ