Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ಮತದಾರರಿಗೆ ಈ ರೀತಿಯ ಸ್ಯಾಡಿಸ್ಟ್‌ ನೇಚರ್‌ ಇರಬಾರದು: ಬೇಸರ ವ್ಯಕ್ತಪಡಿಸಿದ ಎಂ. ಲಕ್ಷ್ಮಣ್‌

ಮೈಸೂರು: 18ನೇ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರುದ್ಧ ಲಕ್ಷ ಮತಗಳ ಅಂತರದಿಂದ ಸೋತ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಅವರು ಮತದಾರರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಮತದಾನ ಮುಗಿದ ಬಳಿಕ ನಾಲ್ಕು ದಿನಗಳ ಬಳಿಕ ಇಂದು (ಜೂನ್‌.8) ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿರುವ ಅವರು, ನನ್ನನ್ನು ಸೋಲಿಸಿದ ಬಗ್ಗೆ ನನಗೇನು ತಕಾರಾರಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಎಷ್ಟು ಬಾರಿ ಸೋಲಿಸಿ ಅವಮಾನಿಸುತ್ತೀರಿ. ಮತದಾರರಿಗೆ ಈ ರೀತಿಯ ಸ್ಯಾಡಿಸ್ಟ್‌ ನೇಚರ್‌ ಇರಬಾರದು ಎಂದು ಎಂ. ಲಕ್ಷ್ಮಣ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಆದಾಗಿನಿಂದ ಇಲ್ಲಿಯವರೆಗೆ ಮೈಸೂರಿಗೆ ಏನೆಲ್ಲಾ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರಂತ ಕ್ಲೀನ್‌ ಇಮೇಜ್‌ ಇರುವ ಸಿಎಂ ದೇಶದಲ್ಲೇ ಇಲ್ಲ. ಆದರೆ ಮೈಸೂರಿನ ಜನತೆ ಎಷ್ಟು ಅಂತಾ ನೋವು ನೀಡುತ್ತೀರಾ ಎಂದು ಆಕ್ರೋಶ ಹೊರಹಾಕಿದರು.

ಇಲ್ಲಿಯವರೆಗೆ ಹಳೇ ಮೈಸೂರು ಭಾಗದಲ್ಲಿ 8 ಜನ ಒಕ್ಕಲಿಗರನ್ನು ಸೋಲಿಸಿದ್ದೀರಿ. ನಾವು ಏನು ಅನ್ಯಾಯ ಮಾಡಿದ್ದೇವೆ. ನಿಮ್ಮ ಪ್ರಕಾರ ಬಿಜೆಪಿ-ಜೆಡಿಎಸ್‌ ಅವರು ಮಾತ್ರ ಒಕ್ಕಲಿಗರಾ? ನಾವು ಒಕ್ಕಲಿಗರು ಎಂದು ಸಾಭೀತು ಪಡಿಸಲು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಕೊನೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿರುವ ಯದವೀರ್‌ ಅವರಿಗೆ ಸಲಹೆ ನೀಡಿದ್ದಾರೆ. ನೀವು ಈ ಹಿಂದಿನ ಸಂಸದರು ಮಾಡಿದ ಹಾಗೆ ಮಾಡಬೇಡಿ. ಕೇಂದ್ರ ಸರ್ಕಾರದಿಂದ ಬರುವ ಯೋಜನಗೆಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಮೈಸೂರು ವಿಮಾನ ನಿಲ್ದಾಣ, ರೈಲ್ವೆ ಟರ್ಮಿನಲ್‌ಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವಂತೆ ಹೇಳಿದರು.

Tags: