ಮೈಸೂರು: ಆದಾಯ ಮೀರಿದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬಿನಿ ಅಧೀಕ್ಷಕ ಅಭಿಯಂತರರ ಮನೆ ಮೇಲೆ ಲೋಕಾಯುಕ್ತ ಗುರುವಾರ ಬೆಳಿಗ್ಗೆ (ಜುಲೈ. 11) ದಿಢೀರ್ ದಾಳಿ ಮಾಡಿದೆ.
ಕಬಿನಿ ಜಲಾಶಯದ ಎಸ್‌ಇ (ಸೂಪರಿಂಟೆಂಡೆಂಟ್ ಎಂಜಿನಿಯರ್) ಕೆ. ಮಹೇಶ್ ಎಂಬುವವರ ಮೈಸೂರಿನ ಮನೆ ಮೇಲೆ ಲೋಕಾ ದಾಳಿ ನಡೆಸಿದೆ. ಚಾಮುಂಡಿ ಬೆಟ್ಟದ ರಸ್ತೆಯ ಕೆಂಪ ಚಲುವಮ್ಮಣಿ ನಗರದ ಮನೆಯಲ್ಲಿನ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕರು ಪ್ರಶಾಂತ್ ಕುಮಾರ್ ಟಾಗೋರ್ ಹಾಗೂ ಮೈಸೂರು ಪ್ರಭಾರ ಎಸ್‌ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ, ಮೈಸೂರು ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಯ್ಯ. ವಿ, ರವಿ ಕುಮಾರ್, ಜಯರತ್ನ, ಲೋಕೇಶ್ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.