Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೈಸೂರು ವಿವಿ ವಿದ್ಯಾರ್ಥಿ ನಿಲಯ ಉಪಹಾರದಲ್ಲಿ ಹಲ್ಲಿ ಪತ್ಯೆ: ಪ್ರತಿಭಟಿಸಿದ ವಿದ್ಯಾರ್ಥಿಗಳು!

ಮೈಸೂರು: ಮೈಸೂರು ವಿಶ್ವ ವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಗೌತಮ್‌ ಪದವೀಧರ ವಿದ್ಯಾರ್ಥಿ ನಿಲಯದಲ್ಲಿನ ಬೆಳಗಿನ ಉಪಹಾರದಲ್ಲಿ ಹಲ್ಲಿ ಪತ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯಕ್ಕೆ ಒಳಾಗುತ್ತಿದೆ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಇಂದು ನಗರದ ಮಾನಸ ಗಂಗೋತ್ರಿಯ ವಿಶ್ವ ಮಾನವ ಆಕೃತಿ ಮುಂಭಾಗ ಗೌತಮ್‌ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಈ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ಉಪಹಾರದಲ್ಲಿ ಹಲ್ಲಿ ಕಾಣಸಿಕೊಂಡಿದೆ. ಈ ವಿಷಯ ಗಮನಕ್ಕೆ ಬರುವ ಮೊದಲೇ ಸುಮಾರು 102 ಜನರು ಈ ಉಪಹಾರವನ್ನು ತಿಂದಿದ್ದಾರೆ. ಗಮನಕ್ಕೆ ಬಂದ ತಕ್ಷಣ ನಾವು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಹಾಸ್ಟೆಲ್‌ ವಾರ್ಡನ್‌ ಅವರಿಗೆ ಮಾಹಿತಿ ನೀಡಿದೆವು. ಯಾವುದೂ ಪ್ರಯೋಜನಕ್ಕೆ ಬಾರಲಿಲ್ಲ. ಕೇವಲ ಊಟದ ವಿಷಯವಷ್ಟೇ ಅಲ್ಲ, ಕೊಠಡಿಗಳು, ಕಿಚೆನ್‌ ಹಾಲ್‌, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳು ಸೇರಿದಂತೆ ಅನೇಕಾನೇಕ ಸಮಸ್ಯೆಗಳನ್ನು ಪ್ರತಿನಿತ್ಯ ನಾವು ಅನುಭವಿಸುತ್ತಿದ್ದೇವೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ ವಿದ್ಯಾರ್ಥಿಗಳು.

Tags: