Mysore
21
overcast clouds

Social Media

ಸೋಮವಾರ, 06 ಜುಲೈ 2026
Light
Dark

ಉಪನ್ಯಾಸಕ, ಪತ್ರಕರ್ತ ಗೋವಿಂದ ಕುಲಕರ್ಣಿ ನಿಧನ

ಮೈಸೂರು: ವರುಣಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾಗೂ ಪತ್ರಕರ್ತ
ಗೋವಿಂದ ಕುಲಕರ್ಣಿ (55) ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರ ಪತ್ರಕರ್ತ ಕೆ.ಎನ್.ರವಿ ಇದ್ದಾರೆ.

‘ಪ್ರಜಾವಾಣಿ’ಯ ವರುಣಾದ ಅರೆಕಾಲಿಕ ವರದಿಗಾರರಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದರು.
ಕೆಲ ಸಂಘ- ಸಂಸ್ಥೆಗಳ ಪದಾಧಿಕಾರಿಗಳಾಗಿ ದುಡಿದಿದ್ದ ಅವರು, ಕೆಲ ಕೃತಿಗಳನ್ನು ರಚಿಸಿದ್ದರು.

ಇತ್ತೀಚೆಗಷ್ಟೇ ಕುಲಕರ್ಣಿ ಅವರ ತಾಯಿ ನಿಧನರಾಗಿದ್ದರು. ಇದಕ್ಕೆ ಸಂಬಂಧಿಸಿದ ಧಾಮಿ೯ಕ ವಿಧಿ ವಿಧಾನಗಳನ್ನು ನೆರವೇರಿಸಲು ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳುವಾಗ ಹೃದಯಾಘಾತವಾಗಿ ಮೃತಪಟ್ಟರು.
ಅವರ ಅಂತ್ಯಕ್ರಿಯೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಭಾನುವಾರ ನಡೆಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!