Mysore
17
broken clouds

Social Media

ಶುಕ್ರವಾರ, 30 ಜನವರಿ 2026
Light
Dark

ಹುಣಸೂರು| ಜಮೀನು ವಿವಾದ: ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

ಹುಣಸೂರು: ಜಮೀನು ವಿವಾದ ಏರ್ಪಟ್ಟ ಪರಿಣಾಮ ಎರಡು ಕುಟುಂಬದ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊಲೆ ಬೆದರಿಕೆ ಹಾಕಿದ ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊಳಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ವಾಮಿ, ವಸಂತ, ಅರ್ಜುನ, ಶಾಂತಮ್ಮ, ರವಿ, ಸಿದ್ದರಾಜು, ನಾಗರಾಜು ಹಾಗೂ ಸಿದ್ದಯ್ಯ ಎಂಬುವವರ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

ಕೊಳಘಟ್ಟ ಗ್ರಾಮದ ಸರ್ವೆ ನಂ.73ರ 4 ಎಕರೆ ಜಮೀನಿನ ವಿಚಾರದಲ್ಲಿ ರತ್ನಮ್ಮ ಹಾಗೂ ಸ್ವಾಮಿ ಎಂಬುವವರ ಕುಟುಂಬದ ನಡುವೆ ಜಗಳ ನಡೆದಿದೆ. ಈ ವೇಳೆ ರತ್ಮಮ್ಮ ಜಮೀನು ಸರ್ವೆ ನಡೆಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗ ಪರಿಶೀಲನೆ ನಡೆಸಲು ಜಮೀನಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ಸ್ವಾಮಿ ಸೇರಿದಂತೆ 8 ಮಂದಿ ಕ್ಯಾತೆ ತೆಗೆದು ಗಲಾಟೆ ನಡೆಸಿದ್ದಲ್ಲದೇ, ರತ್ನಮ್ಮ ಹಾಗೂ ಮಗ ವಿಶಾಂತ್‌ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ರತ್ನಮ್ಮ ಬಿಳಿಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ರತ್ನಮ್ಮರ ದೂರಿನ ಮೇರೆಗೆ ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

 

Tags:
error: Content is protected !!