ಮೈಸೂರು: ಶುಕ್ರವಾರ ನಗರದಲ್ಲಿ ಬಿದ್ದ ಬಿರು ಮಳೆಗೆ ಚಾವಣಿ ಶೀಟ್ ತಲೆ ಮೇಲೆ ಬಿದ್ದು ಚಾವಣಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾರಶೆಟ್ಟಿಹಳ್ಳಿ ಗ್ರಾಮದ ಶಿವಕುಮಾರ್(34) ಮೃತಪಟ್ಟವರು. ಆಲನಹಳ್ಳಿ ವ್ಯಾಪ್ತಿಯ ಮನೆಯೊಂದರಲ್ಲಿ ಮನೆಗೆ ಕಲ್ನಾರ್ ಶೀಟ್ ಹಾಕುವಾಗ ಸಂಜೆ ಬೀಸಿದ ಗಾಳಿಗೆ ಶೀಟ್ ತಲೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.