ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಶ್ರೀನಿವಾಸ್ ಅವರು, ನಾಡಪ್ರಭು ಕೆಂಪೇಗೌಡರು ವಿಶ್ವದಲ್ಲೇ ಹೆಸರುವಾಸಿಯಾದ ಬೆಂಗಳೂರಿನ ನಿರ್ಮಾತೃ ಆಗಿದ್ದಾರೆ. 16ನೇ ಶತಮಾನದಲ್ಲಿಯೇ ಬೆಂಗಳೂರಿನ ದೂರದೃಷ್ಟಿಯಲ್ಲಿಯೇ ಬೆಂಗಳೂರಿಗೆ ದೂರದೃಷ್ಟಿಯುಳ್ಳ ಚೌಕಟ್ಟನ್ನು ಹಾಕಿದ ಮಹಾನ್ ನಾಯಕರು. ಬೆಂಗಳೂರಿಗೆ ನಾಲ್ಕು ಮಹಾದ್ವಾರಗಳನ್ನು ಕಟ್ಟಿಸಿ, ಹಲವಾರು ಕೆರೆಗಳನ್ನು ನಿರ್ಮಿಸಿ, ಒಂದೊಂದು ಸಮುದಾಯಕ್ಕೂ ಪೇಟೆಗಳನ್ನು ಮೀಸಲಿರಿಸಿ, ಇಡೀ ನಗರವನ್ನು ಗಿಡ ಮರ ನೆಡುವ ಮೂಲಕ ಬೆಂಗಳೂರಿನ ಅಭಿವೃದ್ಧಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಆನಂದ್ ಅವರು ಕೆಂಪೇಗೌಡರ ಜೀವನ, ಸಾಧನೆ ಕುರಿತಾಗಿ ಮುಖ್ಯ ಭಾಷಣ ಮಾಡಿ, ಕೆಂಪೇಗೌಡರ ಜೀವನದಲ್ಲಾದ ಅನೇಕ ಬದಲಾವಣೆಗಳನ್ನು ಸಂಪೂರ್ಣವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು.