Mysore
27
scattered clouds
Light
Dark

ವೀರಶೈವ ಮಹಾಸಭಾ ನಂಜನಗೂಡು ತಾಲೂಕು ಘಟಕ ಅಧ್ಯಕ್ಷರಾಗಿ ಕೆಂಪಣ್ಣ ಆಯ್ಕೆ

ಮೈಸೂರು: ಹೆಮ್ಮರಗಾಲ ವೀರಶೈವ ಲಿಂಗಾಯತ ಬಸವ ಬಳಗ ಸಂಘದ ವತಿಯಿಂದ ಅಖಿಲ ಭಾರತ ವೀರಶೈವ ಮಹಾಸಭಾ ನಂಜನಗೂಡು ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೆಂಪಣ್ಣನ ಅವರನ್ನು ಆಯ್ಕೆ ಮಾಡಲಾಗಿದೆ.

ಜೊತೆಗೆ ನಿರ್ದೇಶಕರಾಗಿ ಗೀತಾ ರೇವಣ್ಣ ಅವರನ್ನು ಸಹಾ ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾದ ವಿ.ಮಂಜುನಾಥ್, ಗೌರವಾಧ್ಯಕ್ಷರಾದ ಇಂದ್ರಮ್ಮ, ಹಿರಿಯ ಮುಖಂಡರಾದ ಪಿ.ಸಿ.ನಾಗರಾಜ್, ಜೈದೇವ್, ಗುರುಸ್ವಾಮಿ ನಟರಾಜಣ್ಣ, ಪಂಪಾಪತಿ ನಾಗರಾಜ್, ರುದ್ರೇಶ್, ಮಹಾದೇವ ಪ್ರಸಾದ್, ಪಿ.ಟಿ.ರಾಜು ಉಪಸ್ಥಿತರಿದ್ದರು.