Mysore
35
clear sky

Social Media

ಗುರುವಾರ, 16 ಏಪ್ರಿಲ 2026
Light
Dark

ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್‌ ಒಡೆಯರ್‌ ಭೇಟಿ

ಹುಣಸೂರು: ಮುಂದಿನ ವರ್ಷದಲ್ಲಿ ಅನಧಿಕೃತ ತಂಬಾಕು ಬೆಳೆಗಾರರಿಗೆ ತಂಬಾಕು ಮಾರಾಟ ಮಾಡಿಕೊಳ್ಳಲು ಬೇಗ ಅವಕಾಶ ಮಾಡಿಕೊಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಸೂಚನೆ ನೀಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದು ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಕು ಮಾರುಕಟ್ಟೆಗೆ ಭೇಟಿ ನೀಡಿ ಹರಾಜು ಪ್ರಕ್ರಿಯೆ ವೀಕ್ಷಿಸಿದರು.

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಯದುವೀರ್‌ ಒಡೆಯರ್‌ ಅವರು, ಮುಂದಿನ ವರ್ಷದಲ್ಲಿ ಅನಧಿಕೃತ ತಂಬಾಕು ಬೆಳೆಗಾರರಿಗೆ ತಂಬಾಕು ಮಾರಾಟ ಮಾಡಿಕೊಳ್ಳಲು ಬೇಗ ಅವಕಾಶ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಹರಾಜು ಅಧೀಕ್ಷಕರಾದ ಸಿದ್ದರಾಜು, ಮೀನಾ ಹಾಗೂ ಬ್ರಿಡ್ಜ್ ಭೂಷಣ್, ತಟ್ಟೆಕೆರೆ ಶ್ರೀನಿವಾಸ್, ನಂಜುಂಡೇಗೌಡ, ವಕೀಲ ಮೂರ್ತಿ, ನಾಗರಾಜ್ ಮಲ್ಲಾಡಿ, ಹಿರಿಕ್ಯಾತನಹಳ್ಳಿ ಸತೀಶ್ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

Tags:
error: Content is protected !!