ಮೈಸೂರು : ಮರಾಠಿಗರ ಪುಂಡಾಟದ ವಿರುದ್ಧ ರಣಕಹಳೆ ಮೊಳಗಿಸಿರುವ ಕನ್ನಡ ಪರ ಹೋರಾಟಗಾರರು, ನಾಳೆ (ಮಾ.22) ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಹೀಗಾಗಿ ನಾಳೆ ಕರುನಾಡು ಸ್ತಬ್ದವಾಗಲಿದೆ.
ನಾಳಿನ(ಶನಿವಾರ) ಬಂದ್‌ಗೆ ಸಕಲ ಸಿದ್ದತೆಗಳು ನಡೆದಿದ್ದು, ಕೆಲವರು ಬಂದ್‌ಗೆ ಬಹಿರಂಗ ಬೆಂಬಲ ನೀಡಿದರೆ ಇನ್ನೂ ಕೆಲವರು ಬಾಹ್ಯ ಬೆಂಬಲ ನೀಡಿದ್ದಾರೆ. ಉಳಿದಂತೆ ಇತರರು ಬಂದ್‌ಗೆ ವಿರೋಧ ಸಹ ವ್ಯಕ್ತಪಡಿಸಿದ್ದಾರೆ.
ಬಂದ್ ಹಿನ್ನೆಲೆ ಬೆಂಗಳೂರು, ಮೈಸೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯಲಿದ್ದು, ಕನ್ನಡ ಪರ ಹೋರಾಟಗಾರರು ರಸ್ತೆಗಿಳಿದು ಮರಾಠಿಗರು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಮೊಳಗಿಸಲಿದ್ದಾರೆ.
ಬಂದ್ ಇರುವುದರಿಂದ ನಾಳಿನ ಜನಜೀವನದಲ್ಲಿ ವ್ಯತ್ಯಯ ಉಂಟಾಗಲಿವೆ. ಆದಾಗ್ಯೂ ಶಾಲಾ-ಕಾಲೇಜುಗಳು ನಡೆಯಲಿದೆ. ಜೊತೆಗೆ ಸಾರಿಗೆ ಬಸ್‌ಗಳು ಸಹ ಎಂದಿನಂತೆ ಸಂಚರಿಸಲಿವೆ. ಯಾವುದೇ ಖಾಸಗಿ ಅಥವಾ ಸರ್ಕಾರಿ ಶಾಲಾ-ಕಾಲೇಜಿಗೆ ರಜೆ ಇರಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಖಾಸಗಿ ಶಾಲಾ ಆಡಳಿತ ಮಂಡಳಿವು ನೈತಿಕ ಬೆಂಬಲ ನೀಡಿವೆ. ಎಂದಿನಂತೆ ಶಾಲಾ-ಕಾಲೇಜುಗಳು ತೆರದಿರುತ್ತವೆ. ಪರೀಕ್ಷೆ ಸಹ ನಡೆಯುತ್ತವೆ.
ಏನಿರುತ್ತೆ?
- ಕೆಎಸ್‌ಆರ್‌ಟಿಸಿ ಬಸ್
- ಶಾಲಾ-ಕಾಲೇಜು
- ಆಸ್ಪತ್ರೆ, ವೈದ್ಯಕೀಯ ಸೇವೆ
- ಹೋಟೆಲ್‌ಗಳು
- ಬಾರ್-ರೆಸ್ಟೋರೆಂಟ್
ಏನಿರಲ್ಲ?
- ಮಾರುಕಟ್ಟೆ
- ಓಲಾ-ಊಬರ್
- ಆಟೋ ಸೇವೆ
- ಸಿನಿಮಾ ಮಂದಿರ ಬೆಳಗಿನ ಶೋ





