Mysore
30
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನಾಡು ಕಂಡ ಅಪೂರ್ವ ಸಂತ ಕೈವಾರ ತಾತಯ್ಯ : ಎಚ್ ಎ ವೆಂಕಟೇಶ್ ಅಭಿಪ್ರಾಯ

ಮೈಸೂರು : ಕೈವಾರ ತಾತಯ್ಯ ಈ ನಾಡು ಕಂಡ ಒಬ್ಬ ಅಪೂರ್ವ ಸಂತರು, ಸಮಾಜ ಸುಧಾರಕರು, ಮಹಾನ್ ಜ್ಞಾನಿಗಳು, ಸದಾ ಭಕ್ತಿ, ಭಜನೆ, ಧ್ಯಾನ ಮುಂತಾದ ದೈವಿಕ ಕ್ರಿಯೆಗಳಲ್ಲಿ ನಿರತರಾಗಿದ್ದರು. ಶಾಂತ ಚಿತ್ತ, ಪ್ರೀತಿ ಸರಳ ಬದುಕನ್ನು ಸಾರಿದ ಮಹಾ ಚೇತನ ಎಂದು ಶ್ರೀ ಯೋಗಿ ನಾರಾಯಣ ಯತೀಂದ್ರ ಪ್ರಚಾರ ಸಭಾ ಪ್ರಧಾನ ಸಂಚಾಲಕ ಹಾಗೂ ಮೈಲಾಕ್ ಮಾಜಿ ಅಧ್ಯಕ್ಷರಾದ ಎಚ್ ಎ ವೆಂಕಟೇಶ್ ಅಭಿಪ್ರಾಯಪಟ್ಟರು.

ನಗರದ ಸರಸ್ವತಿ ಪುರಂನಲ್ಲಿರುವ ಬಣಜಿಗ ಬಲಿಜ ವಿದ್ಯಾರ್ಥಿನಿಲಯದಲ್ಲಿ ಯೋಗಿ ನಾರಾಯಣ ಯತೀಂದ್ರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದ ಅವರು, ಭಾರತ ದೇಶದ ಭವಿಷ್ಯದ ಸ್ಥಿತಿಯನ್ನು ಕುರಿತು ಹೇಳಿರುವ ಕಾಲಜ್ಞಾನವು ಒಬ್ಬ ಪ್ರವಾದಿಯ ಪವಾಡವಾಗಿದೆ. ಪ್ರಪಂಚದಲ್ಲಿ ಯಾವುದೇ ಒಂದು ಭಾಗದಲ್ಲಿ ಮುಂದೊಂದು ದಿನ ನಡೆಯಬಹುದಾದ ಘಟನೆಗಳನ್ನು ಇದ್ದ ಸ್ಥಳದಲ್ಲಿಯೇ ಕುಳಿತು ನಿರ್ದಿಷ್ಟವಾಗಿ ಹೇಳುವ ಶಕ್ತಿಯೇ ಕಾಲಜ್ಞಾನವಾಗಿದೆ. ಇಂತಹ ಕಾಲಜ್ಞಾನವನ್ನು ಶ್ರೀ ಯೋಗಿ ನಾರಾಯಣ ಯತೀಂದ್ರರು ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ ಎಂದರು.

ಪ್ರಗತಿಯ ಉತ್ತುಂಗಕ್ಕೆ ಏರುವ ಬರದಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದಿರುವ ಮಾನವ ಜನಾಂಗ ತನ್ನ ಉಳಿವಿಗೆ ಕಾರಣವಾದ ಪ್ರಕೃತಿಯ ಒಡನಾಟವನ್ನೇ ಮರೆತಿದ್ದಾನೆ. ಇದರ ಪರಿಣಾಮವನ್ನು ಮತ್ತು ಮುಂದಿನ ಹಾಗೂ ಹೋಗುಗಳನ್ನು ಜಗತ್ತಿನಲ್ಲಿ ಅನೇಕರು ಭವಿಷ್ಯ ವಾಣಿ ರೂಪದಲ್ಲಿ ಈಗಾಗಲೇ ಮಂಡಿಸಿದ್ದಾರೆ.

ಯುರೋಪ್ ,ಅಮೆರಿಕ, ಜಪಾನ್ ರಾಷ್ಟ್ರಗಳಲ್ಲಿ ಜನ ಇಂತಹ ಮಹನೀಯರನ್ನು ಮತ್ತೆ ಮತ್ತೆ ನೆನೆಯುತ್ತಾರೆ ಮತ್ತು ಪೂಜಿಸುತ್ತಾರೆ. ಆದರೆ ಭರತ ಖಂಡದಲ್ಲಿ ಅವೆಲ್ಲಕ್ಕಿಂತ ಹೆಚ್ಚಿನ ಭವಿಷ್ಯ ವಾಣಿಗಳಿವೆ. ಅನಾದಿ ಕಾಲದಿಂದಲೂ ಕಾಲಕಾಲಕ್ಕೆ ಈ ದೇಶದಲ್ಲಿ ಹಲವಾರು ಮಹಾತ್ಮರು ಮನುಜ ಕುಲದ ಹಾಗೂ ಹೋಗುಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇವರುಗಳಲ್ಲಿ ಕರ್ನಾಟಕದ ಶ್ರೀ ಯೋಗಿ ನಾರಾಯಣ ಯತೀಂದ್ರರು ಬಹಳ ಪ್ರಮುಖರು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಂ ನಾರಾಯಣ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ ಆರ್ ಗೋಪಾಲಕೃಷ್ಣ , ಖಜಾಂಚಿ ಪಾಂಡುವಪುರ ಕೆ ಚಂದ್ರಶೇಖರ್, ನಿರ್ದೇಶಕರಾದ ಬಿ.ಕೆ. ಸುರೇಶ್, ಹೇಮಂತ ಕುಮಾರ್ ,ಚನ್ನಕೇಶವ , ಪಾರ್ಥ ಸಾರಥಿ, ಎಚ್.ಆರ್ .ವೆಂಕಟೇಶ್, ನಿಲಯ ಪಾಲಕ ರಘು ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Tags: