Mysore
28
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಕಬಿನಿ | ಜೂನಿಯರ್‌ ಬೋಗೇಶ್ವರ್‌ ಖ್ಯಾತಿಯ ಆನೆ ಇನ್ನಿಲ್ಲ

ಮೈಸೂರು: ಕಾಡಾನೆಗಳ ನಡುವೆ ಸಂಭವಿಸಿದ ಕಾಳಗದಲ್ಲಿ ಉದ್ದನೆಯ ದಂತವುಳ್ಳ ಜೂನಿಯರ್ ಬೋಗೇಶ್ವರ್ ಎಂದು ಕರೆಸಿಕೊಳ್ಳುತ್ತಿದ್ದ 24 ವರ್ಷದ ಆನೆಯೊಂದು ಮೃತಪಟ್ಟಿದ್ದು, ವನ್ಯಜೀವಿ ಪ್ರೇಮಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಕಬಿನಿ ಹಿನ್ನೀರು, ಡಿ.ಬಿ.ಕುಪ್ಪೆ, ಅಂತರಸಂತೆ ವಲಯದಲ್ಲಿದ್ದ ಉದ್ದನೆಯ ದಂತವುಳ್ಳ ಬೋಗೇಶ್ವರ ಆನೆಯನ್ನೇ (2022ರಲ್ಲಿ ಮೃತಪಟ್ಟಿರುವ) ಹೋಲುವಂತೆ ಉದ್ದನೆಯ ದಂತವುಳ್ಳ ಆನೆಯೊಂದು ಸಫಾರಿ ವಲಯದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅದಕ್ಕೆ ಕೆಲ ವನ್ಯಜೀವಿ ಛಾಯಾಗ್ರಾಹಕರು ಜ್ಯೂನಿಯರ್ ಭೋಗೇಶ್ವರ ಎಂದು ಕರೆಯುತ್ತಿದ್ದರು.

ವಾರದಿಂದೆ ಜ್ಯೂನಿಯರ್ ಭೋಗೇಶ್ವರ ಆನೆಯೂ ಮೃತಪಟ್ಟಿದ್ದು, ಸಫಾರಿಗರು ಹಾಗೂ ಅರಣ್ಯ ಸಿಬ್ಬಂದಿಗೆ ನೋವುಂಟಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜ್ಯೂನಿಯರ್ ಭೋಗೇಶ್ವರ ಆನೆಯ ಸಾವಿನ ಸುದ್ದಿ ಚಿತ್ರದೊಂದಿಗೆ ವೈರಲ್ ಆಗಿದೆ.

ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಕಬಿನಿ ಹಿನ್ನಿರಿನ ಪ್ರದೇಶ ಟವರ್‌ಕೊಲ್ಲಿ ಎಂಬಲ್ಲಿ ಮಾ.23ರಂದು ಗಂಡಾನೆಯೊಂದು ನಿತ್ರಾಣ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಸ್ತಿನಲ್ಲಿದ್ದ ಸಿಬ್ಬಂದಿ ಗಮನಿಸಿದ್ದರು. ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಕಾಡಾನೆಯೊಂದಿಗಿನ ಕಾಳಗದಿಂದ ಗಾಯಗೊಂಡಿರುವುದು ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗಂಡಾನೆಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಅದು ಕೊನೆಯುಸಿರು ಎಳೆದಿದೆ.

 

Tags:
error: Content is protected !!