Mysore
29
broken clouds

Social Media

ಬುಧವಾರ, 14 ಜನವರಿ 2026
Light
Dark

ಕರ್ನಾಟಕ ಬಂದ್|‌ ನಾಳೆಯ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ಕಾವೇರಿ ಕ್ರಿಯಾ ಸಮಿತಿ: ಜಯಪ್ರಕಾಶ್‌

ಮೈಸೂರು: ಕನ್ನಡ ಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್‌ ಇರುವ ಹಿನ್ನೆಲೆ ಈ ಬಂದ್‌ಗೆ ಕಾವೇರಿ ಕ್ರಿಯಾ ಸಮಿತಿಯೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್‌(ಜೆಪಿ) ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಇಂದು(ಮಾರ್ಚ್‌.21) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳಿನ ಬಂದ್‌ಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ನಾಳೆ ಕರ್ನಾಟಕದಲ್ಲಿ ಬೆಳಗ್ಗೆ 6 ರಿಂದ ಸಂಜೆ 6ಗಂಟೆಯ ವರಗೆ ಬಂದ್ ಇರಲಿದೆ. ಅಲ್ಲದೇ ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಬಂದ್ ಮಾಡುತ್ತೇವೆ. ಹೀಗಾಗಿ ಕಾವೇರಿ ಕ್ರಿಯಾ ಸಮಿತಿಯಿಂದ ಸಹಕಾರಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಈ ಬಂದ್‌ಗೆ ಚಿತ್ರ ನಟ ನಟಿಯರು ಭಾಗಿಯಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ಅದಕ್ಕೆ ಚಿತ್ರರಂಗದ ನಟ ನಟಿಯರು, ಸಂಘಟನೆಗಳು ಬೆಂಬಲ ನೀಡಬೇಕು. ಅಲ್ಲದೇ ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲರಲ್ಲೂ ಕೈ ಮುಗಿದು ಮನವಿ ಮಾಡಿ ವಿಡಿಯೋ ಮಾಡಿಕೊಳ್ಳುತ್ತೇವೆ. ಹಾಗಾಗಿ ಎಲ್ಲರೂ ನಾಳಿನ ಬಂದ್‌ಗೆ ಬೆಂಬಲ ನೀಡಬೇಕು ಎಂದರು.

Tags:
error: Content is protected !!