ಟಿ.ನರಸೀಪುರ: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಶ್ರೀಕ್ಷೇತ್ರ ಮುಡುಕುತೊರೆಯಲ್ಲಿ ಜಾತ್ರೆ ಸಂಭ್ರಮ ಮನೆಮಾಡಿದ್ದು, ದನಗಳನ್ನು ಮಾರುವ ಮತ್ತು ಕೊಳ್ಳುವ ವ್ಯವಹಾರ ನಡೆಯುತ್ತಿದೆ.
ಹಳೇ ಮೈಸೂರು ಭಾಗದ ಅಪ್ಪಟ ಹಳ್ಳಿ ಸೊಗಡನ್ನು ಬಿಂಬಿಸುವ ರಾಸುಗಳ ಜಾತ್ರೆಯಾದ ಮುಡುಕುತೊರೆ ದನಗಳ ಜಾತ್ರೆ ಶುರುವಾಗಿದೆ.
ಸಾವಿರಾರು ರಾಸುಗಳ ಜಾತ್ರೆಗೆ ಆಗಮಿಸಿದ್ದು, ಜಾತ್ರೆಗೆ ಕೇವಲ ಮೈಸೂರು ಮಾತ್ರವಲ್ಲದೇ, ಅಕ್ಕ ಪಕ್ಕದ ಜಿಲ್ಲೆಗಳು, ಉತ್ತರ ಕರ್ನಾಟಕದ ಜಿಲ್ಲೆಗಳು, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ರೈತರು ಆಗಮಿಸಿದ್ದಾರೆ. ದನಗಳನ್ನು ಮಾರುವ ಮತ್ತು ಕೊಳ್ಳುವ ವ್ಯವಹಾರ ಇಲ್ಲಿ ನಡೆಯುತ್ತದೆ.