ಎಚ್.ಡಿ.ಕೋಟೆ: ಇಂದಿನಿಂದ ಮೂರು ದಿನಗಳ ಕಾಲ ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಸಿದ್ಧ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ತಂಡದವರು ಇಂದು ದೇವಸ್ಥಾನದ ತಾತ್ಕಾಲಿಕ ಆಸ್ಪತ್ರೆ, ದಾಸೋಹ ಭವನಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆ ಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತೆಗೆದು ಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಬಳಿಕ ಜಾತ್ರೆಯಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾರುವವರು ಶುದ್ಧವಾದ ತಿಂಡಿಗಳನ್ನು ಮಾರಾಟ ಮಾಡಬೇಕು. ಹಣ್ಣುಗಳನ್ನು ಕೊಯ್ದು ಮಾರಾಟ ಮಾಡುವವರು ಮುಚ್ಚಿಕೊಂಡು ಮಾರಾಟ ಮಾಡಬೇಕು. ಹಣ್ಣುಗಳ ಮೇಲೆ ನೊಣಗಳು ಮತ್ತು ಕೀಟಗಳು ಕೂರದ ಹಾಗೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಬಳಿಕ ದಾಸೋಹ ಭವನಕ್ಕೆ ಭೇಟಿ ನೀಡಿ ಭಕ್ತಾದಿಗಳಿಗೆ ಶುದ್ಧವಾದ ಆಹಾರವನ್ನು ನೀಡಬೇಕು. ಅಡುಗೆ ಮಾಡುವಾಗ ಪಾತ್ರೆಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು ಹಾಗೂ ಸೊಪ್ಪು ತರಕಾರಿಗಳನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಹಾಗೂ ಅಡುಗೆ ತಯಾರಾದ ನಂತರ ಅದನ್ನು ಮುಚ್ಚಿಡಬೇಕು ಎಂದು ಸೂಚಿಸಿದರು.





