Mysore
26
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಬೆಟ್ಟದಪುರದಲ್ಲಿ ಸಂಭ್ರಮದ ಜಾನುವಾರು ಜಾತ್ರೆ

ಬೆಟ್ಟದಪುರ: ಇಲ್ಲಿ ನಡೆಯುತ್ತಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ರಾಸುಗಳ ಮಾರಾಟ ಜೋರಾಗಿದೆ.

ಜಾತ್ರೆಗೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದು, ಎತ್ತುಗಳ ಬೆಲೆ ಕೇಳಿ ಶಾಕ್‌ ಆಗುತ್ತಿದ್ದಾರೆ.

ಅದರಲ್ಲಿ ಹಳ್ಳಿಕಾರ್‌ ತಳಿಯ ಜೋಡೆತ್ತುಗಳು 50 ಸಾವಿರದಿಂದ 3 ಲಕ್ಷದವರೆಗೂ ಮಾರಾಟವಾಗಿದ್ದು ಅತ್ಯಂತ ವಿಶೇಷ.

ಈ ಜಾತ್ರೆಗೆ ಮೈಸೂರು ಜಿಲ್ಲೆ ಮಾತ್ರವಲ್ಲದೇ ಹಾಸನ, ಮಂಡ್ಯ, ಕೊಡಗು ಭಾಗದಿಂದಲೂ ಹಳ್ಳಿಕಾರ್‌ ಜೋಡೆತ್ತುಗಳು ಬಂದಿದ್ದು, 1500ಕ್ಕೂ ಹೆಚ್ಚು ಜೋಡಿ ರಾಸುಗಳು ಜನರನ್ನು ಆಕರ್ಷಿಸುತ್ತಿವೆ.

ಹಳ್ಳಿಕಾರ್‌ ಎತ್ತುಗಳನ್ನು ವಾದ್ಯ ಮೇಳದೊಂದಿಗೆ ಜಾತ್ರೆಗೆ ಕರೆತಂದು ರೈತರು ಅವುಗಳನ್ನು ಚಪ್ಪರದ ಕೆಳಗೆ ಆರೈಕೆ ಮಾಡುತ್ತಿದ್ದಾರೆ.

 

Tags: