Mysore
27
light rain

Social Media

ಗುರುವಾರ, 22 ಅಕ್ಟೋಬರ್ 2026
Light
Dark

ಜಂಬೂಸವಾರಿ ಯಶಸ್ವಿ: ಗಜಪಡೆಗೆ ತೂಕ ಪರೀಕ್ಷೆ: 6,105 ಕೆಜಿಯ ಸುಗ್ರೀವನೇ ನಂ.1!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ್ದು, ಇಂದು ಬೀಳ್ಕೊಡುಗೆ ಕಾರ್ಯಕ್ರಮಕ್ಕೂ ಮುನ್ನ ದಸರಾ ಗಜಪಡೆಗೆ ತೂಕ ಪರೀಕ್ಷೆ ನಡೆಸಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ತೂಕ ಪರೀಕ್ಷಾ ಕೇಂದ್ರದಲ್ಲಿ ಆನೆಗಳ ತೂಕ ದಾಖಲಿಸಲಾಯಿತು.

ಈ ಬಾರಿಯ ತೂಕ ಪರೀಕ್ಷೆಯಲ್ಲಿ ಸುಗ್ರೀವ 6,105 ಕೆಜಿ ತೂಗುವ ಮೂಲಕ ಗಜಪಡೆಯಲ್ಲಿ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರಹೊಮ್ಮಿದ್ದಾನೆ. ಶ್ರೀಕಂಠ 6,040 ಕೆಜಿ ಹಾಗೂ ಏಕಲವ್ಯ 5,915 ಕೆಜಿ ತೂಕ ದಾಖಲಿಸಿದ್ದಾರೆ.

ಮಹೇಂದ್ರ 5,620 ಕೆಜಿ, ಅಭಿಮನ್ಯು 5,585 ಕೆಜಿ, ಧನಂಜಯ 5,570 ಕೆಜಿ ಹಾಗೂ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಪ್ರಶಾಂತ 5,425 ಕೆಜಿ ತೂಗಿದ್ದಾರೆ. ಗೋಪಿ 5,415 ಕೆಜಿ ಮತ್ತು ಶ್ರೀರಾಮ 5,150 ಕೆಜಿ ತೂಕ ದಾಖಲಿಸಿದ್ದಾರೆ.

ಹೆಣ್ಣಾನೆಗಳ ಪೈಕಿ ಲಕ್ಷ್ಮೀ 4,010 ಕೆಜಿ, ಚೈತ್ರಾ 3,520 ಕೆಜಿ, ರೂಪಾ 3,290 ಕೆಜಿ ಹಾಗೂ ಕಾವೇರಿ 3,285 ಕೆಜಿ ತೂಗಿವೆ.

ನಾಡಹಬ್ಬ ದಸರಾ ಯಶಸ್ವಿಯಲ್ಲಿ ಪ್ರಶಾಂತ ಆನೆಯ ಪಾತ್ರ ಮಹತ್ವದ್ದಾಗಿದೆ ಎಂದು ಅರಣ್ಯಾಧಿಕಾರಿ ಪ್ರಭುಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ತರಬೇತಿ ಪಡೆದ ಪ್ರಶಾಂತ, ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಗಜಪಡೆಯ ಎಲ್ಲ ಆನೆಗಳು ಆರೋಗ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ.

 

Tags:
error: Content is protected !!