Mysore
20
drizzle

Social Media

ಶನಿವಾರ, 10 ಜನವರಿ 2026
Light
Dark

ಅಂತರ ಕಾಲೇಜು ಅಂತರ ವಲಯ ಮಹಿಳೆಯರ ಕ್ರೀಡಾಕೂಟ !

ಮೈಸೂರು : ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಮೇ.೨ ರಿಂದ ೪ ರವರೆಗೆ ೨೦೨೩-೨೪ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲುಂದ ಅಂತರ ಕಾಲೇಜು ಅಂತರ ವಲಯ ಮಹಿಳೆಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಮೇ.೨ ರಂದು ಬೆಳಿಗ್ಗೆ ೮.೩೦ಕ್ಕೆ ಮೈಸೂರು ವಿವಿಯ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಮೈಸೂರು ವಿವಿಯ ಕುಲಸಚಿವರಾದ ವಿ.ಆರ್.ಶೈಲಜ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಡಾ.ಸವಿತಾ ಪ್ರಶಾಂತ್ ರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಉಪಸ್ಥಿತರಿರುವರು.

ಈ ಕ್ರೀಡಾಕೂಟಕ್ಕೆ ವಿಶ್ವವಿದ್ಯಾನಿಲುಂದ ಸಂಯೋಜಿತ ಕಾಲೇಜುಗಳಿಂದ ೮೦೦ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:
error: Content is protected !!