Mysore
25
few clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಹೆಚ್ಚುತ್ತಿರುವ ವೇಶ್ಯವಾಟಿಕೆ : ದಂಧೆ ನಿಗ್ರಹಿಸಲು ತಂಡ ರಚಿಸುವಂತೆ ಒಡನಾಡಿ ಮನವಿ

prostitution

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಪ್ರತಿ ಕಿಲೋಮಿಟರ್ ಪ್ರದೇಶಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ. ದಂಧೆಕೋರರು ಯೂನಿಸೆಕ್ಸ್ ಸಲೂನ್ ಮತ್ತು ಸ್ಪಾ, ಬ್ಯೂಟಿ ಪಾರ್ಲರ್, ಮಸಾಜ್ ಕೇಂದ್ರ ಮತ್ತು ಎಸ್ಕಾರ್ಟ್ ಸರ್ವಿಸ್ ಮೊದಲಾದವುಗಳ ಹೆಸರನ್ನು ದುರುಪಯೋಗ ಪಡಿಸಿಕೊಂಡು ದಂಧೆ ನಡೆಸುತ್ತಿದ್ದಾರೆ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಕಾ ಹೇಳಿಕೆ ನೀಡಿರುವ ಅವರು, ಅನೇಕ ಕಾಲೇಜುಗಳು, ವಸತಿ ನಿಲಯಗಳು ಹಾಗೂ ಕೌಶಲ್ಯ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರಗಳ ಆಸುಪಾಸಿನಲ್ಲಿ ಈ ಕರಾಳ ದಂಧೆಯು ನಡೆಯುತ್ತಿದೆ. ಅನೇಕ ಯುವತಿಯರು ಹಾಗೂ ಅಪ್ರಾಪ್ತರು ಈ ದಂಧೆಗೆ ಸಿಲುಕಿ ನರಳುವಂತಾಗಿದೆ. ಹಲವು ಕಾಲೇಜು ಹೆಣ್ಣು ಮಕ್ಕಳ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು ಅವರನ್ನು ಬ್ಲಾಕ್‌ಮೇಲ್ ಮಾಡಿ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮ. ಬೆಟ್ಟದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು

ರಾಜ್ಯದ ಬಹುತೇಕ ನಗರಗಳು ಹಾಗೂ ಪಟ್ಟಣಗಳಷ್ಟೇ ಅಲ್ಲದೆ ಅವುಗಳಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿಯೂ ವೇಶ್ಯಾವಾಟಿಕೆ ದಂಧೆ ನಾನಾ ಸ್ವರೂಪಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸಮೀಕ್ಷೆಯೊಂದರ ಪ್ರಕಾರ ರಾಜ್ಯದಲ್ಲಿ ಲೈಂಗಿಕ ದಂಧೆಯಲ್ಲಿ ತೊಡಗಿಸಲ್ಪಟ್ಟ ಯುವತಿಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದರಿಂದ ರಾಜ್ಯವು ಅತ್ಯಂತ ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರನ್ನು ಹೊಂದಿರುವ ರಾಜ್ಯವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಇದು ರಾಜ್ಯದ ಆಡಳಿತ, ಸಾಮಾಜಿಕ ಹಾಗೂ ಆರ್ಥಿಕ ದುಸ್ಥಿತಿಯನ್ನು ತೋರುತ್ತದೆ ಎಂದಿದ್ದಾರೆ.

ಒಡನಾಡಿ ಸಂಸ್ಥೆಯ ಮತ್ತೋರ್ವ ನಿರ್ದೇಶಕ ಪರಶುರಾಮ್ ಅವರು, ವ್ಯೇಶ್ಯಾವಾಟಿಕೆಯಂತಹ ಕರಾಳ ಕಬಂಧ ಬಾಹುಗಳಿಗೆ ಸಿಲುಕಿದ ಹೆಣ್ಣು ಮಕ್ಕಳಷ್ಟೇ ಅಲ್ಲದೆ ಅವರ ಕುಟುಂಬದವರ ಭವಿಷ್ಯವೂ ಡೋಲಾಯಮಾನ ಸ್ಥಿತಿಗೆ ತಲುಪಿದೆ. ಆದ್ದರಿಂದ ವ್ಯೇಶ್ಯಾವಾಟಿಕೆ ದಂಧೆಯನ್ನು ನಿಗ್ರಹಿಸಲು ತಂಡಗಳನ್ನು ರಚಿಸುವಂತೆ ಮೈಸೂರು ಕಾನೂನು ಹಾಗೂ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ನಾಗರಿಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯ ಸಂಯೋಜಿತ ಕಾರ್ಯ ನಿರ್ವಹಣೆಯಿಂದ ವ್ಯೇಶ್ಯಾವಾಟಿಕೆ ದಂಧೆಯನ್ನು ನಿಗ್ರಹಿಸಬಹುದು ಎಂದು ಹೇಳಿದರು.

Tags:
error: Content is protected !!