ಮೈಸೂರು : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೩ನೇ ಜಯಂತಿ ಅಂಗವಾಗಿ ಅಶೋಕಪುರಂನ ಅಶೋಕ ವೃತ್ತದಲ್ಲಿ ಅಶೋಕ ಯೂತ್ ಅಸೋಸಿಯೇಷನ್ ಪಿ.ಟಿ. ಕೃಷ್ಣ ಮತ್ತು ಗುರುರಾಜ್ ಅವರ ನೇತೃತ್ವದಲ್ಲಿ ಆಯೋಜಿಸಿರುವ ದೀಪಾಲಂಕಾರದ ವ್ಯವಸ್ಥೆಯನ್ನು ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸಿದರು.
ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ವಿಶ್ವೇಶ್ವರಯ್ಯ, ಕೆಆರ್ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಯರಾಮ್, ಉಪಾಧ್ಯಕ್ಷ ನಾಗರಾಜ್ ಬಿಲ್ಲಯ್ಯ, ವಾರ್ಡ್ ಅಧ್ಯಕ್ಷ ದೀಪು ಕುವಾರ್ ,ಕೃಷ್ಣರಾಜ ಕ್ಷೇತ್ರ ಎಸ್ಸಿ ಮೋರ್ಚಾ ಅಧ್ಯಕ್ಷ ರವಿ, ಉದ್ಯಮಿ ಗುರುರಾಜ್,ಬೂತ್ ಅಧ್ಯಕ್ಷರಾದ ಪ್ರಜ್ವಲ್, ಚಿದಂಬರ್ ,ಪ್ರದೀಪ್ ಮತ್ತಿತರರು ಹಾಜರಿದ್ದರು.