Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಮೈಸೂರಿನಲ್ಲಿ ಮಹಿಳಾ ವಿದ್ಯಾರ್ಥಿಗಳದ್ದೇ ಮೇಲುಗೈ !

ಮೈಸೂರು: ಸಿಎಂ ತವರು ಜಿಲ್ಲೆಯ ೧೮೩೦೮ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಇವರಲ್ಲಿ ೧೫೬೫೩ ಮಂದಿ ಉತ್ತೀರ್ಣರಾಗಿ ಶೇ.೮೫.೫ರಷ್ಟು ಶೇಕಡವಾರು ಫಲಿತಾಂಶ ಪಡೆಯುವ ಮೂಲಕ ಈ ಬಾರಿಯೂ ಹೆಣ್ಣು ಮಕ್ಕಳೆ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ೧೫೫೬೮ ಬಾಲಕರು ಪರೀಕ್ಷೆ ಬರೆದಿದ್ದು, ಇವರಲ್ಲಿ ೧೧೧೮೮ ಮಂದಿ ಉತ್ತೀರ್ಣರಾಗಿ ಶೇ.೭೧.೮೭ರಷ್ಟು ಫಲಿತಾಂಶ ಪಡೆದಿದ್ದಾರೆ.

ಜಿಲ್ಲೆಯಲ್ಲಿ ೩೦, ೭೫೬ ವಿದ್ಯಾರ್ಥಿಗಳ ಪೈಕಿ ಹೊಸದಾಗಿ ೨೫, ೫೬೬ ವಿದ್ಯಾರ್ಥಿಗಳು, ೧೮೫೨ ಪುನರಾವರ್ತಿತ, ಖಾಸಗಿಯಾಗಿ ೧೨೬೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟು ೨೫, ೫೬೬ ಮಕ್ಕಳು ಉತ್ತೀರ್ಣರಾಗಿದ್ದಾರೆ.

೫೧೯೦ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ೨೬೮೮೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ೨೨೫೭೯ ಮಂದಿ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ೩೮೭೧ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇವರಲ್ಲಿ ೨೯೮೭ ಮಂದಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿಯೂ ದ್ವಿತೀಯ ಪಿಯು ಕಲಾ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿದೆ. ೬೫೫೦ ವಿದ್ಯಾರ್ಥಿಗಳು ಕಲಾ ವಿಷಯ ಪರೀಕ್ಷೆ ಬರೆದಿದ್ದು, ಇವರಲ್ಲಿ ಕೇವಲ ೪೫೬೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೬೯.೬೬ರಷ್ಟು ಶೇಕಡವಾರು ಫಲಿತಾಂಶ ಬಂದಿದೆ.

ವಾಣಿಜ್ಯ ವಿಷಯದಲ್ಲಿ ಪರೀಕ್ಷೆ ಬರೆದಿದ್ದ ೧೦೩೪೧ ವಿದ್ಯಾರ್ಥಿಗಳಲ್ಲಿ ೮೭೦೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡವಾರು ೮೪.೧೯ರಷ್ಟು ಫಲಿತಾಂಶ ಬಂದಿದೆ.

ಜತೆಗೆ ವಿಜ್ಞಾನ ವಿಷಯದಲ್ಲಿ ೧೩೮೬೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ೧೨೨೯೭ ಮಂದಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇಕಡವಾರು ೮೮.೬೯ರಷ್ಟು ಫಲಿತಾಂಶ ಲಭ್ಯವಾಗಿದೆ.

ನಗರ ಪ್ರದೇಶದಲ್ಲಿ ಶೇ.೮೩.೯೮ರಷ್ಟು ಫಲಿತಾಂಶ ಲಭವಾದರೆ, ಗ್ರಾಮೀಣ ಪ್ರದೇಶದಲ್ಲಿ ೭೭.೧೬ರಷ್ಟು ಫಲಿತಾಂಶ ಬಂದಿದೆ.

 

ಮೈಸೂರು ಜಿಲ್ಲೆ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದೆ. ಶೇ.೭೯.೮೯ ರಿಂದ ಶೇ.೮೩.೧೩ಕ್ಕೆ ಏರಿಕೆಯಾಗಿದೆ. ರ್ಯಾಂಕಿಂಗ್‌ನಲ್ಲಿ ಮಾತ್ರ ೧೭ನೇ ಸ್ಥಾನ ಪಡೆದಿದೆ. ಮುಂದಿನ ಬಾರಿ ೧೦ರೊಳಗೆ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು.
-ಮರಿಸ್ವಾಮಿ, ಡಿಡಿಪಿಯು.

Tags: