Mysore
14
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಪ್ರತಾಪ್‌ ಸಿಂಹ ಜೊತೆ ಭಹಿರಂಗ ಚರ್ಚೆಗೆ ಸಿದ್ಧ: ಎಂ. ಲಕ್ಷ್ಮಣ್‌

ಮೈಸೂರು: ನಾನೊಬ್ಬ ಸರಳ ಸರಳ ವ್ಯಕ್ತಿ ಮತ್ತು ಸದಾ ಜನರ ನಡುವೆ ಇರುವವ ಮತ್ತು ಅವರು ಕರೆ ಮಾಡಿದಾಗೆಲ್ಲ ಕೈಗೆ ಸಿಗುವ ವ್ಯಕ್ತಿಯಾಗಿದ್ದೇನೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಹೇಳಿದ್ದಾರೆ.

ನಗರದಲ್ಲಿನ ಕಾರ್ಯಕರ್ತರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಾನು ಸರಳ ವ್ಯಕ್ತಿ ಅಂತ ಹೇಳುತ್ತಾ ಹಾಲಿ ಸಂಸದ ಪ್ರತಾಪ್ ಸಿಂಹ ಮೇಲೆ ಪರೋಕ್ಷ ದಾಳಿ ನಡೆಸಿದರು.

ತಮ್ಮ ವಿರುದ್ಧ ಕಾಮೆಂಟ್ ಮಾಡದಂತೆ ಪ್ರತಾಪ್ ಸಿಂಹ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ, ತಡೆಯಾಜ್ಞೆ ತೆರವುಗೊಳಿಸಿದರೇ ಅವರ ಕೊಳಕು ಮನಸ್ಥೀತಿ ಬಿಚ್ಚಿಡುತ್ತೇನೆ ಎಂದರು.

ಪ್ರತಾಪ್‌ ಸಿಂಹ ಹೇಸರೇಳದೇ ದಾಳಿ ನಡೆಸಿದ ಲಕ್ಷ್ಮಣ್‌, ನಾನು ಕಾರಲ್ಲಿ ಓಡಾಡಲ್ಲ, ಜೂಜುಕೋರನಲ್ಲ, ಮದ್ಯವ್ಯಸನಿ ಅಲ್ಲ, ಧೂಮ್ರಪಾನಿಯೂ ಅಲ್ಲ, ರಾತ್ರಿಯ ವ್ಯವಹಾರಗಳು ತನಗಿಲ್ಲ, ಭ್ರಷ್ಟಾಚಾರದ ಹಣದಲ್ಲಿ ರೆಸಾರ್ಟ್ ನಿರ್ಮಾಣದ ಕೆಲಸಕ್ಕೆ ಮುಂದಾಗಿಲ್ಲ, ಮಡಿಕೇರಿಯಲ್ಲಿ ನೂರಾರು ಎಕರೆ ಕಾಫಿ ಪ್ಲಾಂಟೇಷನ್ ತನಗಿಲ್ಲ, ಈಗಲೂ ತಾನು ಬೆಂಗಳೂರಿಗೆ ಟ್ರೈನು ಮತ್ತು ಮಡಿಕೇರಿಗೆ ಬಸ್ಸಲ್ಲಿ ಹೋಗೋದು, ತನ್ನದು ಕ್ಲೀನ್ ಇಮೇಜ್ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

ತಾನು ಒಕ್ಕಲಿಗ ಅಲ್ಲ ಎನ್ನುವ ಸಂಸದನ ಕೊಳಕು ಮನಸ್ಥಿಯನ್ನು ಜನರ ಮುಂದೆ ಬಿಚ್ಚಿಡಬೇಕಿದೆ, ಅವರೊಂದಿಗೆ ಮಾಧ್ಯಮ ಮುಂದೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ, ಅವರು ದಯವಿಟ್ಟು ಅ ತಡೆಯಾಜ್ಞೆಯನ್ನು ಹಿಂಪಡೆಯಲಿ ಎಂದು ಇದೇ ವೇಳೆ ಲಕ್ಷ್ಮಣ್‌ ಸವಾಲು ಹಾಕಿದರು.

Tags:
error: Content is protected !!