Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಭೌತಶಾಸ್ತ್ರ ವಿಭಾಗದ ಬಗ್ಗೆ ನನಗೆ ಮೊದಲಿನಿಂದಲೂ ಒಲವು-ಪ್ರೊ.ಹೇಮಂತ್ ಕುಮಾರ್

ಮೈಸೂರು : ನಾನು ಅಧ್ಯಯನ ಮಾಡುತ್ತಿದ್ದ ಸಮಯದಿಂದಲೂ ನನಗೆ ಭೌತಶಾಸ್ತ್ರ ವಿಭಾಗದ ಮೇಲೆ ಏನೋ ಒಲವು ಇತ್ತು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ಭೌತಶಾಸ್ತ್ರದ ಅಧ್ಯಯನ ವಿಭಾಗದಲ್ಲಿ ರೂಸಾ ಅನುದಾನದಡಿ ನವೀಕರಿಸಲಾದ ಐನ್ಸ್‌ ಸ್ಟೈನ್ ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಸಾಕಷ್ಟು ಅಧ್ಯಾಪಕರಿಗೆ ಬಡ್ತಿ ಸಿಕ್ಕಿರಲಿಲ್ಲ. ಐದು-ಆರು ವರ್ಷದಿಂದ ವಿಳಂಬವಾಗಿತ್ತು. ನನ್ನ ಅವಧಿಯಲ್ಲಿ ಹೆಚ್ಚು ಮಂದಿಗೆ ಬಡ್ತಿ ನೀಡಿದ್ದೇನೆ. ಎಲ್ಲಾ ವಿಭಾಗದಲ್ಲೂ ಬಡ್ತಿ ನೀಡಿದ್ದೇನೆ. ಆ ಮೂಲಕ ಅಧ್ಯಾಪಕರು ಉತ್ಸಾಹದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಇದು ನನಗೆ ಆತ್ಮತೃಪ್ತಿಯನ್ನೂ ನೀಡಿದೆ ಎಂದರು.

ನಾನು ಪಿಯುಸಿ ಮುಗಿದ ಮೇಲೆ ಎಂಜಿನಿಯರಿಂಗ್ ಮಾಡುವ ಒಲವಿತ್ತು. ಆಗ ಇದ್ದಿದ್ದೇ ರಾಜ್ಯದಲ್ಲಿ 14  ಎಂಜಿನಿಯರಿಂಗ್ ಕಾಲೇಜು. ನನಗೆ ಬಾಗಲಕೋಟೆಯಲ್ಲಿ ಸೀಟು ಸಿಕ್ಕಿದರೂ ನಾನು ಹೋಗಲಿಲ್ಲ. ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡುವ ಅಂತ ನಿರ್ಧರಿಸಿದೆ. ಅದಕ್ಕಾಗಿ  ಭೌತಶಾಸ್ತ್ರ ಪ್ರವೇಶ ಕೂಡ ಪಡೆದೆ. ಆದರೆ, ಸಣ್ಣ ಅಪಘಾತದಲ್ಲಿ ಕೈಗೆ ಗಾಯ ಮಾಡಿಕೊಂಡು ಪರೀಕ್ಷೆ ಬರೆಯಲು ಆಗಲಿಲ್ಲ. ನಂತರ ಬಿಇಡಿ ಮಾಡಿದೆ. ಜೊತೆಗೆ ಕಂಪ್ಯೂಟರ್ ಸೈನ್ಸ್‌ ನಲ್ಲಿ ಎಂಎಸ್ಸಿ ಮಾಡಿದೆ.ಹೀಗಾಗಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡುವ ಕನಸು ನನಸಾಗಲಿಲ್ಲ ಎಂದರು.

ಕಂಪ್ಯೂಟರ್ ಸೈನ್ಸ್ ಓದಿ ಅಧ್ಯಾಪಕನಾದೆ, ಕುಲಪತಿಯಾದೆ. ಇದು ನನಗೆ ಎಲ್ಲವನನ್ನೂ ನೀಡಿದೆ. ಹಣ, ಹುದ್ದೆ, ಹೆಸರು ಎಲ್ಲಾ ನೀಡಿದೆ. ಆದರೂ ನನ್ನ ಮನಸ್ಸಲ್ಲಿ ಭೌತಶಾಸ್ತ್ರದ ಬಗ್ಗೆ ವಿಶೇಷ ಪ್ರೀತಿ ಇದೆ. ಖ್ಯಾತ ಪ್ರಾಧ್ಯಾಪಕರು ಈ ವಿಭಾಗದಲ್ಲಿ ಪಾಠ ಮಾಡಿದ್ದಾರೆ. ಸಣ್ಣ ವಿಭಾಗ ಇಂದು ದೊಡ್ಡದಾಗಿ ಬೆಳೆದಿದೆ. ಮಂಗಳೂರು, ಶಿವಮೊಗ್ಗದಿಂದ ಕೂಡ ಇಲ್ಲಿಗೆ ಓದಲು ವಿದ್ಯಾರ್ಥಿಗಳು ಬರುತ್ತಿದ್ದರು ಎಂದು ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದರು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರೊ.ಎ.ಪಿ.ಜ್ಞಾನ ಪ್ರಕಾಶ್, ಪಿಎಂಇಬಿ ನಿರ್ದೇಶಕ ಪ್ರೊ.ಎನ್.ಕೆ.ಲೋಕನಾಥ್, ಪ್ರೊ. ಶ್ರೀಧರ್ ಸೇರಿದಂತೆ ಇತರರು ಇದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ