ಹುಣಸೂರು: ತಂಬಾಕು ಹದಮಾಡುವ ಬ್ಯಾರನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬ್ಯಾರನ್ ಗೇರಿಸಿದ್ದ ಹೊಗೆಸೊಪ್ಪು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಲಕ್ಷಾಂತರ ಹಣ ನಷ್ಟ ಉಂಟಾಗಿರುವ ಘಟನೆ ಗಾವಡಗೆರೆ ಹೋಬಳಿಯ ಹರವೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಚಲೇಗೌಡ ಎಂಬವರಿಗೆ ಸೇರಿದ ೧೩*೧೩ ಅಳತೆಯ ತಂಬಾಕು ಹದಗೊಳಿಸುವ ಬ್ಯಾರನ್‌ಗೆ ತಂಬಾಕು ಎಲೆಗಳು ಹದಗೊಳ್ಳುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಕರಕಲಾಗಿದೆ.
ತಕ್ಷಣ ಗ್ರಾಮಸ್ಥರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ನಂತರ ಹುಣಸೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಅಕ್ಕಪಕ್ಕದ ಮನೆಗೆ ಬೆಂಕಿ ತಗುಲುವುದನ್ನು ತಪ್ಪಿಸಿದ್ದಾರೆ.
ರೈತ ಕುಚಲೇಗೌಡ ಹರವೆ ಗ್ರಾಮದ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸುಮಾರು ೭ ಲಕ್ಷ ರೂ. ಸಾಲ ಪಡೆದಿದ್ದು ಹಾಗೂ ಕೈಸಾಲವಾಗಿ ೨ ಲಕ್ಷ ರೂ. ಬೆಳೆ ಸಾಲ ಪಡೆದಿದ್ದರು. ಈಗ ಬ್ಯಾರನ್ ಸುಟ್ಟುಹೋಗಿರುವುದರಿಂದ ಕಂಗಾಲಾಗಿದ್ದಾರೆ.