Mysore
26
few clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಹುಣಸೂರು: ಹುಡಾ ಅಧ್ಯಕ್ಷರಾಗಿ ಎಚ್.ಪಿ ಅಮರ್‌ನಾಥ್‌ ಅಧಿಕಾರಿ ಸ್ವೀಕಾರ

ಹುಣಸೂರು: ಹುಡಾ(ಹುಣಸೂರು ನಗರ ಅಭಿವೃದ್ಧಿ ಪ್ರಾಧಿಕಾರ)ದ ನೂತನ ಅಧ್ಯಕ್ಷರಾಗಿ ಎಚ್.ಪಿ.ಅಮರ್‌ನಾಥ್‌ ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ತಮ್ಮ ಆಡಳಿತ ಅವಧಿಯಲ್ಲಿ ಪಾರದರ್ಶಕ ಆಡಳಿತ ನೀಡುವೆ, ಪ್ರಾಧಿಕಾರದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು ಸಾರ್ವಜನಿಕರಿಗೂ ತಿಳಿಯಬೇಕೆಂಬ ಉದ್ದೇಶದಿಂದ ಹುಡಾ ವೆಬ್‌ಸೈಟ್ ಆರಂಬಿಸಲಾಗುವುದು ಎಂದು ಹೇಳಿದರು.

ಹುಡಾ ಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು.  ನಗರದಲ್ಲಿ ನೂರಾಕ್ಕೂ ಹೆಚ್ಚು ಸಿ ಎ ಸೈಟ್ ಗಳಿದ್ದು ಬೇಡಿಕೆ ಆಧರಿಸಿ ಆದ್ಯತೆ ಮೇರೆಗೆ ಸಂಘ ಸಂಸ್ಥೆಗಳಿಗೆ ನೀಡಲು‌ ಕ್ರಮ ವಹಿಸಲಾಗುವುದು. ಅನಧಿಕೃತ ಬಡಾವಣೆಗಳನ್ನು ಸರ್ಕಾರದ ನಿರ್ದೇಶನದ ಮೇರೆಗೆ ಎ ಖಾತಾ ಮತ್ತು ಬಿ ಖಾತಾ ಯೋಜನೆಯು ಈ ವಾರದೊಳಗೆ ಜಾರಿಗೊಳಿಸುವೆ ಎಂದು ಭರವಸೆ ನೀಡಿದರು.

ನಗರದ 84 ಅನಧಿಕೃತ ಬಡಾವಣೆಗಳ ಸಮಸ್ಯೆಯನ್ನು ಬಗೆಹರಿಸಲು ಶಾಸಕರು ಹಾಗೂ ನಗರ ಸಭೆ ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸಿ ಹುಣಸೂರು ನಗರವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತನ್ನನ್ನು ಹುಡಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಿಎಂ ಸಿದ್ದ ರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರುಗಳಾದ ಸತೀಸ್ ಜಾರಕಿಹೋಳಿ, ಭೈರತಿ ಸುರೇಶ್, ಡಾ ಎಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ಗೆ ಅಭಿನಂದನೆ  ತಿಳಿಸಿದರು.

Tags:
error: Content is protected !!