ಹುಣಸೂರು: ತಾಲೂಕಿನಾದ್ಯಾಂತ ಭಾನುವಾರ(ಜು.14) ಸಂಜೆ ಗಾಳಿ ಸಮೇತ ಭಾರಿ ಮಳೆ ಸುರಿದಿದ್ದು, ಗಾಳಿ ಮಳೆ ಅಬ್ಬರಕ್ಕೆ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಾಲೂಕಿನ ಕಲ್ಕುಣಿಕೆ ಗ್ರಾಮದ ನಿಂಗಣ್ಣ ಅವರ ಮನೆ ಬಳಿಯ ತೆಂಗಿನ ಮರ ಬುಡ ಸಮೇತ ಮನೆ ಮೇಲೆ ಬಿದ್ದಿದ್ದು, ಪರಿಣಾಮ ಮನೆ ಮೇಲ್ಚಾವಣಿಗೆ ಹಾನಿಯಾಗಿದೆ. ಮನೆಯವರು ಹೊರಗೆ ಹೋಗಿದ್ದರಿಂದ ಎಲ್ಲಾರು ಬಚಾವ್ ಆಗಿದ್ದಾರೆ.
ತಾಲೂಕಿನಾದ್ಯಾಂತ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದೆ. ಸಂಜೆ 5ರ ವೇಳೆಗೆ ಆರಂಭವಾದ ಜಡಿ ಮಳೆ ರಾತ್ರಿಯಾದರೂ ಜೋರಾಗಿ ಸುರಿಯಿತು. ಮನೆಯಿಂದ ಹೊರ ಹೋಗಿದ್ದವರು ಮನೆಗೆ ತೆರಳಲು ಪರದಾಡಿದರು.





