Mysore
27
scattered clouds

Social Media

ಬುಧವಾರ, 16 ಏಪ್ರಿಲ 2025
Light
Dark

ಕೈ ಹಿಡಿದ ಮೆಕ್ಕೆಜೋಳ ಬೆಳೆ: ಈ ಬಾರಿ ರೈತರಿಗೆ ಉತ್ತಮ ಫಸಲಾಗೋದು ಪಕ್ಕಾ!

ಸರಗೂರು: ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನಲ್ಲಿ ಈ ಬಾರಿ ಅನ್ನದಾತರ ಜಮೀನುಗಳಲ್ಲಿ ಮೆಕ್ಕೆಜೋಳ ಅದ್ಧೂರಿಯಾಗಿ ಬೆಳೆದು ನಿಂತಿದೆ.

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಈ ಬಾರಿ ಮೆಕ್ಕೆಜೋಳ ಬೆಳೆಯನ್ನು ಅದ್ಧೂರಿಯಾಗಿ ಬೆಳೆಯಲಾಗಿದೆ. ಕಳೆದ ೨ ವರ್ಷಗಳಿಂದ ಹತ್ತಿ ಬೆಳೆ ರೈತರಿಗೆ ಭಾರೀ ನಷ್ಟವನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ರೈತರು ಮೆಕ್ಕೆಜೋಳ ಫಸಲಿನತ್ತ ಮುಖ ಮಾಡಿದ್ದಾರೆ.

ಕಡಿಮೆ ಖರ್ಚು ಮತ್ತು ಅಲ್ಪ ಮಳೆಯಾದರೆ ಸಾಕು ಮೆಕ್ಕೆಜೋಳ ಫಸಲು ಅದ್ಧೂರಿಯಾಗಿ ಬೆಳೆದು ನಿಲ್ಲಲಿದೆ. ಇದರ ಜೊತೆ ಜೊತೆಗೆ ಈ ಬಾರಿ ಮಳೆ ಕೂಡ ಉತ್ತಮವಾಗಿ ಬೀಳುತ್ತಿರುವುದರಿಂದ ಮೆಕ್ಕೆಜೋಳ ಉತ್ತಮ ಇಳುವರಿ ಕೊಡುತ್ತೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೆಲ ರೈತರು ಹೊಗೆಸೊಪ್ಪು ಹಾಗೂ ಶುಂಠಿ ಬೆಳೆ ಬೆಳೆದಿದ್ದು, ಅವುಗಳು ಕೂಡ ಈ ಬಾರಿ ಉತ್ತಮ ಆದಾಯ ತಂದುಕೊಡಲಿವೆ ಅಂತಾ ಹೇಳಲಾಗುತ್ತಿದೆ.

ಕಳೆದ ವರ್ಷ ಮಳೆ ಕಡಿಮೆಯಾದ ಪರಿಣಾಮ ಮೆಕ್ಕೆಜೋಳ ಅಧಿಕ ಇಳುವರಿ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮೆಕ್ಕೆ ಜೋಳ ಬೆಳೆ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಅಂದಾಜಿಸಲಾಗಿದೆ.

Tags: