Mysore
30
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ನಾವೂ ಕೇಳ್ತೀವಿ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ: ಕೆಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಎನ್.ಚಲುವರಾಯಸ್ವಾಮಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮದ್ದೂರಿನ ತರಮ್ಮನಕಟ್ಟೆ ಗ್ರಾಮದಲ್ಲಿ ಸುದ್ದಿಗಾರರೊದಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ ಎಂದು ಟೀಕಿಸಿದ್ದಾರೆ.

ಕುಮಾರಸ್ವಾಮಿ ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅವರಿಗೆ ಅನುಭವ ಇಲ್ಲ ಅದಕ್ಕೆ ಆತರ ಮಾತನಾಡುತ್ತಾರೆ ಅಷ್ಟೇ. ಯಾವ ಸರ್ಕಾರ ಬಂದ್ರು ಅವರಿಗೆ ಅಧಿಕಾರ ಸಿಕ್ಕುದ್ರುನು ಪೂರ್ಣ ಅವಧಿಯನ್ನ ಮುಗಿಸೋಕೆ ಯಾವತ್ತು ರೆಡಿ ಇಲ್ಲದ ಅವರಿಗೆ ಏನು ಗೊತ್ತು ಎಂದು ಹರಿಹಾಯ್ದರು.

ಗೃಹ ಸಚಿವ ಪರಮೇಶ್ವರ್ -ಸತೀಶ್ ಜಾರಕಿಹೋಳಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ರಾಷ್ಟ್ರೀಯ ನಾಯಕರು, ಸೀನಿಯರ್ ಲೀಡರ್ ಅನ್ನು ಭೇಟಿ ಮಾಡಬಾರದ.? ಯಾರು ಯಾರನ್ನು ಭೇಟಿ ಮಾಡಬಾರದು ಅಂತ ನಿಗಧಿ ಮಾಡಕ್ಕಾಗುತ್ತಾ? ಎಂದಿದ್ದಾರೆ.

Tags: