Mysore
20
overcast clouds
Light
Dark

ನಂಜನಗೂಡಿನ ರಾಯರ ಮಠದಲ್ಲಿ ಗುರುಪೂರ್ಣಿಮೆ ಸಂಭ್ರಮ

ಮೈಸೂರು : ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿರುವ ರಾಯರ ಮಠದಲ್ಲಿ ಗುರುಪೂರ್ಣಿಮೆ ಸಂಭ್ರಮ ಮನೆಮಾಡಿತ್ತು. ಈ ಮಠಕ್ಕೆ ರಾಘವೇಂದ್ರ ಸ್ವಾಮಿಗಳ ಮೂಲಮಠವೆಂದೂ ಸಹ ಕರೆಯಲಾಗುತ್ತಿದೆ. ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು.ಅಲ್ಲದೆ ಭಕ್ತರ ದಂಡೇ ಮಠಕ್ಕೆ ಹರಿದು ಬರುತ್ತಿದ್ದು, ರಾಯರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಈ ಮಠಕ್ಕೆ ಮಧ್ವಾಚಾರ್ಯರ ಮೂಲಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠ ಎಂದು ಹೇಳುತ್ತಾರೆ. ಅಲ್ಲದೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ದೇಶ ಪರ್ಯಟನೆ ಮಾಡುತ್ತಿದ್ದಾಗ ಈ ಮಠಕ್ಕೂ ಭೇಟಿ ನೀಡಿದ್ದರು. ಆದ್ದರಿಂದ ಇಲ್ಲಿ ಮೂಲದೇವರು ಶ್ರೀ ರಾಘವೇಂದ್ರ ಸ್ವಾಮಿಗಳು ಎಂದು ಹೇಳುತ್ತಾರೆ. ಪ್ರತಿನಿತ್ಯವೂ ಕೂಡ ಹೆಚ್ಚಿನ ಭಕ್ತರು ಈ ಮಠಕ್ಕೆ ಭೇಟಿ ನೀಡಿ ಮದುವೆ ಕಾರ್ಯಗಳು, ವಿದ್ಯಾಭ್ಯಾಸ ಸಂಬಂಧಪಟ್ಟಂತೆ , ಕೆಲಸದ ವಿಚಾರ, ಹಣಕಾಸಿನ ವ್ಯವಹಾರಗಳ ಬಗ್ಗೆ ಪೂಜಾ ಕೈಂಕರ್ಯಗಳನ್ನ ಮಾಡಿಸುತ್ತಾರೆ,

ಇನ್ನು ಈ ದೇವಾಲಯದಲ್ಲಿ ರಾಘವೇಂದ್ರಸ್ವಾಮಿಗಳು ಮೂಲ ದೇವರು ಹಾಗೂ ಆಂಜನೇಯ ದೇವರನ್ನ ಇಲ್ಲಿ ಕಾಣಬಹುದು. ಅಲ್ಲದೆ ರಾಯರ ಮಠದಲ್ಲಿ ಪಂಚ ಬೃಂದಾವನ ಒಳಗೊಂಡಿದೆ. ತೀರ್ಥರು ಐಕ್ಯವಾದ ಸ್ಥಳಗಳನ್ನ ಇಲ್ಲಿ ಕಾಣಬಹುದು.