Mysore
29
overcast clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ತಾತ ಸೇರಿದಂತೆ ಮೊಮ್ಮಕ್ಕಳು ಜಲಸಮಾಧಿ ; ಕಾವೇರಿ ನದಿಯಲ್ಲಿ ದುರಂತ

ಮೈಸೂರು : ಮೊಮ್ಮಗನನ್ನು ರಕ್ಷಿಸಲು ಹೋದ ತಾತ ಸೇರಿದಂತೆ ಮೂರು ಮಂದಿ ಕಾವೇರಿ ನದಿಯಲ್ಲಿ ಜಲಸಮಾಧಿಯಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಶನಿವಾರ ನಡೆದಿದೆ.

ಟಿ.ನರಸೀಪುರದ  ಸ್ಥಳೀಯ ನಿವಾಸಿಗಳಾದ ಚೌಡಯ್ಯ(70), ಭರತ್‌(13), ಧನುಷ್‌ (10) ಮೃತರು. ನದಿ ತಟದಲ್ಲಿದ್ದ ಇಬ್ಬರು ಮಕ್ಕಳು ನೀರಿಗಿಳಿದಿದ್ದಾರೆ. ಈ ವೇಳೆ ತಾತ ಮಗುವನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ.

ಮೃತದೇಹಗಳನ್ನು ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಟಿ.ನರಸೀಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Tags:
error: Content is protected !!